ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಜನ್ಮದಿನಾಚರಣೆ

 ಜಿಲ್ಲಾ ಯುವ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಜನ್ಮದಿನಾಚರಣೆ ಕಾರ್ಯಕ್ರಮ ಮಂಗಳೂರಿನಲ್ಲಿ ನಿರಾಶ್ರಿತರಿಗೆ ಊಟ ಹಂಚುವುದರ ಮುಖಾಂತರ ಆಚರಿಸಲಾಯಿತು.
ಜಿಲ್ಲಾ ಯುವ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಜನ್ಮದಿನಾಚರಣೆ ಕಾರ್ಯಕ್ರಮ ಮಂಗಳೂರಿನಲ್ಲಿ ನಿರಾಶ್ರಿತರಿಗೆ ಊಟ ಹಂಚುವುದರ ಮುಖಾಂತರ ಆಚರಿಸಲಾಯಿತು.
Published on
ಮಂಗಳೂರು: ಜಿಲ್ಲಾ ಯುವ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಅವರ ನೇತೃತ್ವದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಜನ್ಮದಿನಾಚರಣೆ ಕಾರ್ಯಕ್ರಮ ಮಂಗಳೂರಿನಲ್ಲಿ ನಿರಾಶ್ರಿತರಿಗೆ ಊಟ ಹಂಚುವುದರ ಮುಖಾಂತರ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷರಾದ ಅಕ್ಷಿತ್ ಸುವರ್ಣ, ಭಾರತದ 11ನೇ ಪ್ರಧಾನಿ ಯಾಗಿ ಹೆಚ್ ಡಿ ದೇವೇಗೌಡರು ತಮ್ಮ ಅಧಿಕಾರ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ನಾವು ನೆನಪಿಸಬೇಕಾಗುತ್ತದೆ. ಮಹಿಳಾ ಮೀಸಲಾತಿ, ಕಾಶ್ಮೀರ ಸಮಸ್ಯೆ, ರೈತರಿಗೆ ರಸಗೋಬ್ಬರ ಸಬಡ್ಸಿ, ಕಾವೇರಿ ನೀರಿನ ಸಮಸ್ಯೆ, ಮಹಾದಾಯಿ ಸಮಸ್ಯೆಯ ಹೋರಾಟ ಅವರ ರೈತರ ಮೇಲೆ ಇರುವ ಕಾಳಜಿ ಇಂದಿನ ರಾಜಕಾರಣಿಗಳಿಗೆ ಹಾಗೂ ಯುವಕರಿಗೆ ಮಾರ್ಗದರ್ಶನವಾಗಿದೆ, ಭಗವಂತ ಇನ್ನಷ್ಟು ಆಯಸ್ಸು, ಆರೋಗ್ಯ ನೀಡಿ ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಜೆಡಿಎಸ್ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ವಸಂತ್ ಪೂಜಾರಿ, ಮೀನುಗಾರ ಘಟಕ ರಾಜ್ಞಾಧ್ಯಕ್ಷ ರತ್ನಾಕರ ಸುವರ್ಣ ಯುವ ಜೆಡಿಎಸ್ ಮಂಗಳೂರು ಉತ್ತರ ವಿಧಾನಸಭಾ ಅಧ್ಯಕ್ಷ ರತೀಶ್ ಕರ್ಕೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿತೇಶ್ ರೈ, ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ಸತ್ತಾರ್ ಬಂದರು, ಹಾಗು ಜಿಲ್ಲಾ ಮುಖಂಡರುಗಳಾದ ವಿನ್ಸೆಂಟ್ ಸುರತ್ಕಲ್, ಪುಷ್ಪರಾಜ್,ಭಾರತಿ, ಕನಕದಾಸ ಕುಳೂರು, ಚೂಡಮಣಿ ಹಾಗು ಯುವ ಜೆಡಿಎಸ್ ಪಧಾದಿಕಾರಿಗಳಾದ ಸುಶಾಂತ್ ಪೂಜಾರಿ,ವಿಖ್ಯಾತ್, ಪ್ರೀತೇಶ್, ರಕ್ಷಿತ್, ವಿನಿತ್ ಪೂಜಾರಿ,ಆದರ್ಶ ಪೂಜಾರಿ ಮುಂತಾದವರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net