ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ, ಚಿತ್ತಾಪುರ ಬಿಜೆಪಿ ಟಿಕೆಟ್ ಆಕಾಂಕ್ಷಿ ಅರವಿಂದ ಚವ್ಹಾಣ

cng election
Published on

ಕಲಬುರಗಿ: ಚಿತ್ತಾಪುರದ ಮಾಜಿ ಶಾಸಕರಾದ ಬಿಜೆಪಿ ಪ್ರಭಾವಿ ನಾಯಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ ಮತ್ತು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರವಿಂದ್ ಚವ್ಹಾಣ‌ ಮೊದಲಾದವರು ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸಮ್ಮುಖದಲ್ಲಿ ಚಿತ್ತಾಪುರದ ವಿವಿಧ ಸಮುದಾಯಗಳ ಪ್ರಭಾವಿ ಮುಖಂಡರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾದರು.

ಡಿಕೆ ಶಿವಕುಮಾರ್ ಅವರು ನಿವಾಸದಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಡಿಕೆಶಿ ಪಕ್ಷದ ಧ್ವಜ ನೀಡಿ ಸ್ವಾಗತಿಸಿಕೊಂಡರು. ನಂತರ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿ ಅವರೊಂದಿಗೆ ಮಾತುಕತೆ ನಡೆಸಿದರು.

ಹೆಬ್ಬಾಳ ಮತ್ತು ಚವ್ಹಾಣ ಅವರೊಂದಿಗೆ ಪ್ರಮುಖರಾದ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿರ್ದೇಶಕ ಶರಣಪ್ಪ ನಾಟೀಕರ್, ಅಖಿಲ ಕರ್ನಾಟಕ ಪ್ರದೇಶ ಕೋಲಿ ಸಮಾಜ ಅದ್ಯಕ್ಷ ಸಾಬಣ್ಣ ಡಿಗ್ಗಿ ನಗರ ಆಶ್ರಯ ಕಮಿಟಿ‌ ಸದಸ್ಯಜಾಫರ್ ಪಟೇಲ್,ಬಂಜಾರ ಸಮಾಜ ಹಾಗೂ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬೋರು ರಾಠೋಡ, ಯುವ ಮೋರ್ಚಾ ಶಕ್ತಿ ಕೇಂದ್ರ ಅದ್ಯಕ್ಷ ರವೀಂದರ್ ವಾಲಿಯಾ, ತಿಪ್ಪಣ್ಣಪ್ಪ ಇಂಗನಕಲ್ಮಾಜಿ ನಿರ್ದೇಶಕರು, ಪಿಎಲ್‌ಡಿ ಬ್ಯಾಂಕ್ ಚಿತ್ತಾಪುರ, ಶಿವಕುಮಾರ್ ಯಾಗಾಪುರ ಕೆಡಿಪಿ ಸದಸ್ಯರು ಹಾಗೂ ಕೋಲಿ ಸಮಾಜದ ಯುವ ಮುಖಂಡರು ಸೇರಿದಂತೆ ಅನೇಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net