ವರ್ಕ್ಔಟ್​​​​​ನಿಂದ ಹೃದಯಾಘಾತ ಆಗಲ್ಲ, ಅದು ತಪ್ಪು ಪರಿಕಲ್ಪನೆ: ಮಾಜಿ ಶಾಸಕ ರಾಜು ಗೌಡ

spandana
Published on

ಬೆಂಗಳೂರು: ಸ್ಪಂದನಾ ವರ್ಕ್ ಔಟ್ ಮಾಡುತ್ತಿದ್ದ ಜಿಮ್​​​​ಗೆ ಜಾಯಿನ್ ಆಗಿರುವ ಮಾಜಿ ಶಾಸಕ ರಾಜುಗೌಡ ಅವರು ಸ್ಪಂದನಾ ಅವರ ಅಕಾಲಿಕ ಅಗಲಿಕೆ ನಿಜಕ್ಕೂ ಶಾಕ್ ಆಗಿದೆ ಎಂದರು.

ಮತ್ತೆ ಮತ್ತೆ ದೊಡ್ಡಮನೆಗೆ ಈ ತರ ಯಾಕೆ ಆಗ್ತಿದೆ? ದೇವರಿಗೆ ಗೊತ್ತು ಎಂದ ರಾಜು ಗೌಡ, ಪುನೀತ್ ಸಾವಿನ ನೋವು ಇನ್ನು ಮಾಸುವ ಮೊದಲೇ ಮತ್ತೊಂದು ಸಾವಾಗಿದೆ. ಮುರಳಿ ಮತ್ತು ವಿಜಯ್ ರಾಘವೇಂದ್ರ ಅವರೊಟ್ಟಿಗೆ ನನ್ನ ಒಡನಾಟ ಚೆನ್ನಾಗಿತ್ತು. ಅವರು ಇದೇ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದರು ಎಂದು ಹೇಳಿದರು.

ಪುನೀತ್ ಅವರೊಟ್ಟಿಗೆ ಕಳೆದ ಒಂಬತ್ತು ವರ್ಷಗಳಿಂದ ಒಂದೇ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದೆ. ವರ್ಕ್ ಔಟ್ ನಿಂದ ಹೃದಯಾಘಾತ ಆಗಲ್ಲ. ಅದು ತಪ್ಪು ಪರಿಕಲ್ಪನೆ. ಪುನೀತ್ ಅವರ ಸಾವಿನ ನಂತರ ಅಶ್ವಿನಿ ಅವರು ಸಮಾಜ ಸೇವೆ ಮಾಡುತ್ತಿದ್ದಾರೆ ಎಂದು ರಾಜುಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net