ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಜೈಲು; ಕೋರ್ಟ್​ ಆದೇಶ

Vinay Kulakrni 1
Vinay Kulakrni
Published on

ಹುಬ್ಬಳ್ಳಿ: ಯೋಗೀಶ್​ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಷ್ಟು ದಿನ ಸಿಬಿಐ ವಶದಲ್ಲಿದ್ದ ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಜೈಲು ಪಕ್ಕಾ ಆಗಿದೆ.

ಇಂದು ವಿಚಾರಣೆ ನಡೆಸಿದ ಧಾರವಾಡ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ವಿನಯ್​ ಕುಲಕರ್ಣಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ.

ಇಂದು ಸಿಬಿಐ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ನವೆಂಬರ್​ 23ರವರೆಗೂ ವಿನಯ್​ ಕುಲಕರ್ಣಿಗೆ ಜೈಲಿನಲ್ಲಿಯೇ ಇರಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net