

ಮಾಜಿ ಮೇಯರ್ ಸಂಪತ್ರಾಜ್ ಪಿಎ ಅರುಣ್ನನ್ನು ಸಿಸಿಬಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಈತ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿ ಗಲಭೆಕೋರರ ಜತೆ ನಿರಂತರ ಸಂಪರ್ಕ ಹೊಂದಿದ್ದ ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದೇ ಹಿನ್ನೆಲೆಯಲ್ಲಿ ಅರುಣ್ನನ್ನು ಬಂಧಿಸಲಾಗಿದೆ.
ಈತ ಪುಲಕೇಶಿನಗರದ ಮಾಜಿ ಮೇಯರ್ ಸಂಪತ್ರಾಜ್ ಅವರ ಪಿಎ. ಇವನಿಗೆ ಎಸ್ಡಿಪಿಐ ಜತೆ ನಿರಂತರ ಸಂಪರ್ಕವಿತ್ತು ಎಂಬ ವಿಚಾರ ಬಹಿರಂಗವಾಗಿದೆ. ಆತ ಫೋನ್, ಮೆಸೇಜ್ಗಳ ಮೂಲಕ ಸಂಪರ್ಕ ಇಟ್ಟುಕೊಟ್ಟಿದ್ದ. ಅಷ್ಟೇ ಅಲ್ಲ ಕೆಲವೊಮ್ಮೆ ಭೇಟಿ ಕೂಡ ಮಾಡಿದ್ದ. ಗಲಭೆ ನಡೆಯುವ ದಿನ ಗಲಭೆಕೋರರ ಜತೆ ಹಲವು ಬಾರಿ ಮಾತನಾಡಿದ್ದ ಎನ್ನಲಾಗಿದೆ. ಹಾಗೇ ಸಂಪತ್ರಾಜ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ.