ಭ್ರಷ್ಟಾಚಾರ ಸಾಬೀತು: ಫ್ರಾನ್ಸ್​ನ ಈ ಮಾಜಿ ಅಧ್ಯಕ್ಷರಿಗೆ ಜೈಲು ಶಿಕ್ಷೆ ಸಿಕ್ಕಿತು

Nicolas Sarkozy
Nicolas Sarkozy
Published on

ಫ್ಯಾರಿಸ್: ಭ್ರಷ್ಟಾಚಾರದ ಆರೋಪ ಸಾಬೀತಾಗಿದ್ದರಿಂದ ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಫ್ಯಾರಿಸ್ ನ್ಯಾಯಾಲಯ ತೀರ್ಪು ಸೋಮವಾರ ನೀಡಿದೆ.

2007 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಣಕಾಸಿನ ಪ್ರಭಾವದ ಕುರಿತಂತೆ ವಿಚಾರಣೆ ನಡೆಯುತ್ತಿರುವಾಗ ನ್ಯಾಯಾಧೀಶರಿಂದ ಮಾಹಿತಿ ಕದಿಯಲು ಪ್ರಯತ್ನಿಸಿದ್ದು ಹಾಗೂ ನ್ಯಾಯಾಧೀಶರಿಗೆ ಲಂಚ ನೀಡಲು ಆಮೀಷ ಒಡ್ಡಿದ್ದ ಆರೋಪ ಸರ್ಕೋಜಿ ಮೇಲೆ ಹೊರಿಸಲಾಗಿತ್ತು.

ಮೂರು ವರ್ಷ ಶಿಕ್ಷೆ ವಿಧಿಸಿದ್ದರೂ ಅದರಲ್ಲಿ ಎರಡು ವರ್ಷದ ಶಿಕ್ಷೆಯನ್ನು ಅಮಾನತು ಮಾಡಲಾಗಿದೆ. ಹೀಗಾಗಿ ಸರ್ಕೋಜಿ ಒಂದು ವರ್ಷದ ಅವಧಿಗೆ ಜೈಲಿಗೆ ಹೋಗಲು ಬಂದರೂ ಅದು ಕೂಡ ಸಾಧ್ಯವಿಲ್ಲ. ಏಕೆಂದರೆ ಫ್ರಾನ್ಸ್​ನಲ್ಲಿ ಜೈಲು ಶಿಕ್ಷೆ ಎರಡು ವರ್ಷ ಮೇಲಿದ್ದರೇ ಮಾತ್ರ ಹೋಗಬೇಕಾಗುತ್ತದೆ.

68 ವರ್ಷದ ನಿಕೋಲಸ್ ಸರ್ಕೋಜಿ ಅವರು 2007 ರಿಂದ 2012 ರವರೆಗೆ ಫ್ರಾನ್ಸ್​ನ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. (ಏಜೇನ್ಸಿಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net