

ಜೈಪುರ: ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಅವರ ಪುತ್ರ ಸಂಸದ ದುಶ್ಯಂತ್ ಸಿಂಗ್ ಅವರಿಗೆ ಕರೊನಾ ವೈರಸ್ ಸೋಂಕು ಹರಡಿಲ್ಲ ಎಂದು ತಿಳಿದು ಬಂದಿದೆ.
ಮಾಜಿ ಸಿಎಂ ವಸುಂಧರಾ ರಾಜೆ ಅವರು ಟ್ವಿಟ್ ಮಾಡಿ ನಾನು ಹಾಗೂ ನನ್ನ ಪುತ್ರ ದುಶ್ಯಂತ್ ಸಿಂಗ್ ಕರೊನಾ ವೈರಸ್ ಸೋಂಕು ತಪಾಸಣೆಗೆ ಒಳಗಾಗಿದ್ದೇವೆ. ವರದಿಯಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ಕರೊನಾ ವೈರಸ್ ಸೋಂಕಿಗೆ ತುತ್ತಾಗಿರುವ ಗಾಯಕಿ ಕನ್ನಿಕಾ ಕಪೂರ್ ಅವರ ಸಂಪರ್ಕಕ್ಕೆ ವಸುಂಧರಾ ರಾಜೆ ಹಾಗೂ ಅವರ ಪುತ್ರ ದುಶ್ಯಂತ್ ಬಂದ ಹಿನ್ನೆಲೆಯಲ್ಲಿ ಸೋಂಕು ಹರಡಿರಹುದು ಎಂದು ಶಂಕಿಸಲಾಗಿತ್ತು.
ವಸುಂಧರಾ ರಾಜೆ ಹಾಗೂ ಅವರ ಪುತ್ರನ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಇಬ್ಬರಿಗೂ ಸೋಂಕು ಹರಡಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಇಬ್ಬರು ನಿರಾಳಗೊಂಡಿದ್ದಾರೆ.
ಸಂಸದ ದುಶ್ಯತ್ಸಿಂಗ್ ಲೋಕಸಭೆಯ ಕಲಾಪದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಅವರ ಸಂಪರ್ಕಕ್ಕೆ ಬಂದವರಿಗೆ ಸೋಂಕು ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ವರದಿಯಿಂದ ಭೀತಿ ದೂರವಾಗಿದೆ.
ಗಾಯಕಿ ಕನ್ನಿಕಾ ಕಪೂರ್ ಇತ್ತೀಚೆಗೆ ಲಂಡನ್ನಿಂದ ಅವರು ಮುಂಬೈಗೆ ಬಂದಿದ್ದರು. ಅವರಿಗೆ ಸೋಂಕು ಹರಡಿತ್ತು. ವೈದ್ಯರು ಪ್ರತ್ಯೇಕವಾಗಿ ಇರುವಂತೆ ಸೂಚಿಸಿದ್ದರೂ ಇತ್ತೀಚೆಗೆ ಪಾರ್ಟಿ ಮಾಡಿದ್ದರು. ಪಾರ್ಟಿಯಲ್ಲಿ ವಸುಂಧರಾರಾಜೆ ಅವರ ಪುತ್ರ ದುಶ್ಯಂತ್ ಸಿಂಗ್ ಹಾಗೂ ಇತರರು ಪಾಲ್ಗೊಂಡಿದ್ದರು. (ಏಜೆನ್ಸೀಸ್)