

ಬೆಂಗಳೂರು: ಸತತ ರಾಜಕೀಯ ಒತ್ತಡದ ನಡುವೆ ಬಿಡುವು ಮಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ದಿನ ವಿಶ್ರಾಂತಿಗಾಗಿ ರೆಸಾರ್ಟ್ಗೆ ತೆರಳಿದ್ದಾರೆ.
ಬೆಂಗಳೂರಿನ ಹೊರವಲಯದ ರೆಸಾರ್ಟಲ್ಲಿ ಸಿದ್ದರಾಮಯ್ಯ ವಿಶ್ರಾಂತಿ ಪಡೆಯಲು ತೆರಳಿದ್ದಾರೆ. ತಮ್ಮ ಆಪ್ತ ಸಹಾಯಕರನ್ನೂ ಬಿಟ್ಟು ತೆರಳಿರುವ ಸಿದ್ದರಾಮಯ್ಯ ಏನಾದರೂ ರಾಜಕೀಯ ತಂತ್ರ ಹೆಣದಿದ್ದಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದ್ದಕ್ಕೆ ಮುನಿಸಿಕೊಂಡಿರುವ ಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಟಕ್ಕರ್ ಕೊಡ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ. ಕೆಶಿ ಮತ್ತು ಎಚ್ಡಿಕೆ ಮೈತ್ರಿ ಪಾಲಿಟಿಕ್ಸ್ ಗೆ ಸಿದ್ದರಾಮಯ್ಯ ಬೇಸತ್ತಿದ್ದಾರೆ ಎಂದು ಹೇಳಲಾಗಿದೆ.
ನಾಳೆ ಸಂಜೆ ರೆಸಾರ್ಟ್ ಇಂದ ವಾಪಸ್ ಆಗಲಿರುವ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಮಗಳ ಮದುವೆಗೆ ದೆಹಲಿಗೆ ತೆರಳಲಿದ್ದಾರೆ. ಸುರ್ಜೇವಾಲಾ ಮೈಸೂರು ಮೇಯರ್ ಚುನಾವಣೆ ಸೇರಿದಂತೆ ಇತ್ತಿಚಿನ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಿರುವ ಸಿದ್ದರಾಮಯ್ಯ, ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಬಳಿಯೂ ಚರ್ಚೆ ನಡೆಸಲಿದ್ದಾರೆ.