ಪಾಕಿಸ್ತಾನದಲ್ಲಿ ಮಾಜಿ ಅಂಬಾಸಿಡರ್ ಮಗಳ ಕೊಲೆ!

deadbody
Published on

ಇಸ್ಲಮಾಬಾದ್ : ಮಾಜಿ ಪಾಕಿಸ್ತಾನಿ ಡಿಪ್ಲೊಮ್ಯಾಟ್​ ಒಬ್ಬರ ಮಗಳನ್ನು ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ದಕ್ಷಿಣ ಕೊರಿಯ ಮತ್ತು ಕಜಾಖಿಸ್ತಾನಕ್ಕೆ ಪಾಕಿಸ್ತಾನದ ಅಂಬಾಸಿಡರ್​ ಆಗಿ ಕಾರ್ಯ ನಿರ್ವಹಿಸಿರುವ ಶೌಖತ್​ ಮುಕದಂ ಅವರ ಮಗಳಾದ ನೂರ್​ ಮುಕದಂ ಮೃತಳು.

ಪಾಕಿಸ್ತಾನದ ರಾಜಧಾನಿ ಇಸ್ಲಮಾಬಾದ್​ನಲ್ಲಿ 27 ವರ್ಷದ ನೂರ್​ ಮುಕದಂರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಆಕೆಯ ಸ್ನೇಹಿತನೆನ್ನಲಾದ ಜಾಹಿರ್​ ಜಫ್ಫರ್​ ಎಂಬುವನನ್ನು ಕೃತ್ಯದ ಸ್ಥಳದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ಕೊಲೆಗೆ ಕಾರಣ ಇನ್ನೂ ತಿಳಿದುಬಂದಿಲ್ಲ.

ಪಾಕಿಸ್ತಾನದಲ್ಲಿ ಡಿಪ್ಲೊಮ್ಯಾಟಿಕ್ ಮಿಷನ್​ಗಳ ಮತ್ತು ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಪ್ರಶ್ನೆ ಎದ್ದಿರುವ ಸಮಯದಲ್ಲಿ ಈ ಅಪರಾಧ ಸಂಭವಿಸಿದೆ. ಜುಲೈ 16 ರಂದು ಅಫ್ಘಾನಿಸ್ತಾನದ ಅಂಬಾಸಿಡರ್​ ನಜೀಬುಲ್ಲ ಅಲಿಖಿಲ್ ಅವರ 26 ವರ್ಷದ ಮಗಳು ಸಿಲ್ಸಿಲಾ ಅಲಿಖಿಲ್​ ಎಂಬುವರನ್ನು ಇಸ್ಲಮಾಬಾದ್​​ನಲ್ಲಿ ಅಪಹರಿಸಿ, ಕಿರುಕುಳ ನೀಡಲಾಗಿತ್ತು. ಸ್ವಲ್ಪ ಸಮಯದ ನಂತರ ಬಿಡುಗಡೆ ಮಾಡಲಾಗಿತ್ತು ಎಂದು ಅಫ್ಘಾನಿಸ್ತಾನ ಸರ್ಕಾರ ಆರೋಪಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net