ಕೌನ್ಸೆಲಿಂಗ್ ವರ್ಗಾವಣೆ ಜಾರಿಗೆ ಸಮಿತಿ ರಚನೆ

ತಂತ್ರಜ್ಞಾನ ಆಧಾರಿತ ಪ್ರಕ್ರಿಯೆ, ಭೂ ಮಾಪಕರು, ವಿಎಗಳ ವರ್ಗ
vidhana soudha
vidhana soudha
Published on: 

ಬೆಂಗಳೂರು: ಭೂ ಮಾಪಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಕಾಯ್ದುಕೊಳ್ಳಲು ತಂತ್ರಜ್ಞಾನ ಆಧಾರಿತ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೆ ಕಂದಾಯ ಇಲಾಖೆ ಸಮಿತಿಯನ್ನು ರಚನೆ ಮಾಡಿದೆ.

ಕಂದಾಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಆಗಲಿದ್ದು, ಬಳ್ಳಾರಿ, ಹಾಸನ, ಉತ್ತರ ಕನ್ನಡ ಮತ್ತು ಕೋಲಾರ ಜಿಲ್ಲೆಗಳ ಹೆಚ್ಚುವರಿ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಕಂದಾಯ ಆಯುಕ್ತಾಲಯದ ತಹಸೀಲ್ದಾರ್(ಆಡಳಿತ) ಸದಸ್ಯರಾಗಿರಲಿದ್ದಾರೆ. ಬೆಂಗಳೂರು ಕಂದಾಯ ಆಯುಕ್ತಾಲಯದ ಅಪರ ಕಂದಾಯ ಆಯುಕ್ತ(ಆಡಳಿತ)ರನ್ನು ಕಾರ್ಯದರ್ಶಿ ಆಗಿ ನೇಮಿಸಲಾಗಿದೆ.

ಸಮಿತಿ ಸಲ್ಲಿಸುವ ಕರಡು ನಿಯಮಗಳಲ್ಲಿನ ಸಾಧಕ- ಬಾಧಕಗಳನ್ನು ಪರಿಶೀಲಿಸಿ ನಿಯಮಗಳನ್ನು ಅಂತಿಮಗೊಳಿಸಲು ಕಂದಾಯ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಕಂದಾಯ ಆಯುಕ್ತಾಲಯದ ಆಯುಕ್ತರು, ಬೆಂಗಳೂರು ನಗರ ಜಿಲ್ಲಾಧಿಕಾರಿ, ಅಪರ ಕಂದಾಯ ಆಯುಕ್ತರು ಮತ್ತು ಸರ್ಕಾರದ ಉಪ ಕಾರ್ಯದರ್ಶಿ ಸದಸ್ಯರಾಗಿರಲಿದ್ದಾರೆ.