ಮಾಜಿ ಸಚಿವರಿಗೆ ಅರಣ್ಯ ಕಂಟಕ

join sarve report
ಜಂಗಾಲಕುಂಟೆ ಅರಣ್ಯ ಜಮೀನು ಪ್ರದೇಶ.
Published on

ಕೋಲಾರ: ಮಾಜಿ ಸಚಿವ ಕೆ.ಆರ್​.ರಮೇಶ್​ ಕುಮಾರ್​ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಅರಣ್ಯ ಜಮೀನು ಜಂಟಿ ಸರ್ವೇ ವರದಿಯನ್ನು ಜಿಲ್ಲಾಡಳಿತವು ಜ.24ರಂದು ಸರ್ಕಾರ ಹಾಗೂ ಹೈಕೋರ್ಟ್​ಗೆ ಸಲ್ಲಿಸಿದ್ದು, 60.23 ಎಕರೆ ಅರಣ್ಯ ಜಮೀನು ಒತ್ತುವರಿಯಾಗಿರುವುದು ಸಾಬೀತಾಗಿದೆ.

ಅರಣ್ಯ ಜಾಗವು ಒತ್ತುವರಿಯಾಗಿದ್ದು, ಇದರ ಮಾಲೀಕತ್ವಕ್ಕಾಗಿ ರಮೇಶ್​ಕುಮಾರ್​ ಮತ್ತು ಅರಣ್ಯ ಇಲಾಖೆಯ ನಡುವೆ ಕಾನೂನು ಹೋರಾಟ ನಡೆದಿತ್ತು, ಈ ಬಗ್ಗೆ ಹೈಕೋರ್ಟ್​ ಜಂಟಿ ಸರ್ವೇ ನಡೆಸುವಂತೆ ಸೂಚನೆ ನೀಡಿತ್ತಾದರೂ, ಜ.15 ಮತ್ತು 16ರಂದು ರಮೇಶ್​ ಕುಮಾರ್​ ಸಮ್ಮುಖದಲ್ಲೇ, ಕಂದಾಯ ಹಾಗೂ ಅರಣ್ಯ ಅಧಿಕಾರಿಗಳು ಸರ್ವೇ ನಡೆಸಿದ್ದಾರೆ.

ಅದರಂತೆ ಜಿಲ್ಲಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಭೂದಾಖಲೆಗಳ ಉಪನಿರ್ದೇಶಕರನ್ನು ಒಳಗೊಂಡ ಸಮಿತಿಯು ವರದಿ ಸಿದ್ಧಪಡಿಸಿ ಸಲ್ಲಿಸಿದೆ. ಹೊಸಹುಡ್ಯ ಸರ್ವೆ ನಂ.1ರ ಪೈಕಿ 6 ಎಕರೆ ಹಾಗೂ ಸರ್ವೇ ನಂ.2ರ ಪೈಕಿ 54.23 ಎಕರೆ ಅರಣ್ಯ ಗಡಿಯೊಳಗೆ ರಮೇಶ್​ಕುಮಾರ್​ (ಪ್ರತಿವಾದಿ 9) ಸ್ವಾಧಿನದಲ್ಲಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದು, ವಿವಾದಿತ ಜಮೀನು ಅರಣ್ಯ ಜಮೀನಿನ ಗಡಿಯೊಳಗೆ ಬರುತ್ತದೆ ಎಂದು ತಿಳಿಸಲಾಗಿದೆ.

ವಿವಾದಕ್ಕೆ ಕಾರಣವಾಗಿದ್ದ ಜಮೀನಿಗೆ ಸಂಬಂಧಿಸಿದ ಕಂದಾಯ ಇಲಾಖೆಯ ವರದಿಯನ್ನು ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಸಂಬಂಧಿಸಿದ ವರದಿಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಹೈಕೋರ್ಟ್​ ಹಾಗೂ ಸರ್ಕಾರಕ್ಕೆ ಸಲ್ಲಿಸಿದ್ದು, ಎರಡೂ ಇಲಾಖಾಧಿಕಾರಿಗಳ ಪರಸ್ಪರ ತದ್ವಿರುದ್ಧವಾಗಿರುವುದು ಕಂಡುಬಂದಿದೆ.

ಜಂಟಿ ಸರ್ವೇ ವೇಳೆ ರಮೇಶ್​ ಕುಮಾರ್​ ಅವರು ಅರಣ್ಯ ಇಲಾಖೆಯ ಗಂಟರ್ಸ್​ ಸರ್ವೇಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಸರಪಳಿ, ಅರಣ್ಯ ಇಲಾಖೆಯ ಗಂಟರ್ಸ್​ ಚೈನ್​ ಹಾಗೂ ಅತ್ಯಾಧುನಿಕ ರೋವರ್​ ಯಂತ್ರ ಸೇರಿ ಮೂರು ವಿಧಾನಗಳ ಮೂಲಕ ಸರ್ವೇ ನಡೆಸಲಾಗಿದ್ದು, ಅರಣ್ಯ ಇಲಾಖೆಯ ಜಮೀನು ಒತ್ತುವರಿಯಾಗಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

* ಅರಣ್ಯ ಇಲಾಖೆಯ ವರದಿ ಅಂಶಗಳು

* ಕರ್ನಾಟಕ ಅರಣ್ಯ ಕಾಯ್ದೆ 1963ಯ ವಿವಿಧ ಕಲಂಗಳು, ಅರಣ್ಯ ನಿಯಮಾವಳಿ 1969 ನಿಯಮ 42, 43 ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ 1980 ಉಲ್ಲಂನೆ. ಆದ್ದರಿಂದ ಅರಣ್ಯ ಕಾಯ್ದೆ 1963ರ ಸೆಕ್ಷನ್​ 64(ಎ)ರಂತೆ ಅರಣ್ಯ ಒತ್ತುವರಿ ತೆರವುಗೊಳಿಸಲು ಹಾಗೂ ಕಾನೂನು ಕ್ರಮ ಜರುಗಿಸಲು ಕ್ರಮಕೈಗೊಳ್ಳಬೇಕಿದೆ.

* ರಮೇಶ್​ಕುಮಾರ್​ ಅವರ ಹೆಸರಿಗೆ ಖಾತೆ ಪೋಡಿ ಮಂಜೂರು ಮಾಡಿರುವ ಜಮೀನುಗಳು ಅಮಾನ್ಯವಾಗಿರುತ್ತವೆ. ಆದ್ದರಿಂದ ಸದರಿ ಅಕ್ರಮ ಭೂ ಮಂಜೂರಾತಿ ರದ್ದುಗೊಳಿಸಲು ಕ್ರಮಕೈಗೊಳ್ಳಬೇಕು.

* ಜಿಲ್ಲೆಯ ಇನ್​ವೆಂಟರಿ ಆ್​ ಾರೆಸ್ಟ್​ ವರದಿ ಪ್ರಕಾರ ಸರ್ಕಾರಕ್ಕೆ ಉಂಟಾದ ನಷ್ಟವನ್ನು ಸದರಿ ಆರೋಪಿತ ರಮೇಶ್​ಕುಮಾರ್​ ಅವರಿಂದ ಸರ್ಕಾರಕ್ಕೆ ಭರಿಸಲು ಕ್ರಮವಹಿಸಬೇಕಾಗಿರುತ್ತದೆ.

* ಅರಣ್ಯ ಪ್ರದೇಶದ ಗಡಿಯೊಳಗೆ ಅಕ್ರಮ ಭೂ ಮಂಜೂರಾತಿ ನೀಡಿರುವ ಹಾಗೂ ಅಕ್ರಮ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿರುವ ಕಂದಾಯ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಸಕ್ಷಮ ನ್ಯಾಯಾಲಯದಲ್ಲಿ ಕ್ರಿಮಿನಲ್​ ಮೊಕದ್ದಮೆ ದಾಖಲಿಸಲು ಕ್ರಮವಹಿಸಬೇಕಾಗಿರುತ್ತದೆ.

* ಶ್ರೀನಿವಾಸಪುರ ಅರಣ್ಯ ವಲಯದಲ್ಲಿ ದಾಖಲಾದ ಅರಣ್ಯ ಅಪರಾಧ ಮೊಕದ್ದಮೆ 59/2006&07ಕ್ಕೆ ಸಂಬಂಧಿಸಿದಂತೆ ಅರಣ್ಯ ಪ್ರದೇಶ ಒತ್ತುವರಿ ಮಾಡಿಕೊಂಡು ಅನಧಿಕೃತವಾಗಿ ಸ್ವಾಧಿನದಲ್ಲಿರುವುದಕ್ಕಾಗಿ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅನ್ವಯ ಪರಿಸರಕ್ಕೆ ಆದ ನಷ್ಟದ ಮೊತ್ತವನ್ನು ಸದರಿ ಪ್ರಕರಣದ ಆರೋಪಿಯಾದ ರಮೇಶ್​ ಕುಮಾರ್​ ಅವರಿಂದ ಸರ್ಕಾರಕ್ಕೆ ಭರಿಸಲು ಕ್ರಮಕೈಗೊಳ್ಳಬೇಕಿರುತ್ತದೆ.

* ನ್ಯಾಯಾಲಯದಲ್ಲಿ ಪ್ರಕರಣವಿದ್ದರೂ ಪೋಡಿ ಮಾಡಿರುವ ಕಂದಾಯ ಅಧಿಕಾರಿಗಳ ವಿರುದ್ಧ ಸಕ್ಷಮ ಪ್ರಾಧಿಕಾರದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಕ್ರಮವಹಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

* ಕಂದಾಯ ವರದಿಯಲ್ಲೇನಿದೆ..?

* ಹೊಸಹುಡ್ಯ ಗ್ರಾಮದ ಸರ್ವೇ ಸಂಖ್ಯೆ 2ರ ಾರೆಸ್ಟ್​ ಸೆಟ್ಲಮೆಂಟ್​ ಪ್ರಕ್ರಿಯೆಯ ವಿವರಗಳು, ಸೆಟ್ಲಮೆಂಟ್​ ಮ್ಯಾಪ್​ ಹಾಗೂ ಕರ್ನಾಟಕ ಅರಣ್ಯ ನಿಯಮ 1969 ಸೆಕ್ಷನ್​ 19ರಂತೆ ನಮೂನೆ 3ರಲ್ಲಿ ನಿರ್ವಹಿಸಿರುವ ಾರೆಸ್ಟ್​ ರಿಜಿಸ್ಟರ್​ ಸಲಿಸಿಲ್ಲ.

* 1944ರ ಅರಣ್ಯ ಅಧಿಸೂಚನೆಯಂತೆ ಸದರಿ ಜಮೀನಿನ ಗಡಿಯನ್ನು ಸ್ಥಳದಲ್ಲಿ ಗುರುತಿಸಿದಾಗ ಹೊಸಹುಡ್ಯ ಸರ್ವೇ ನಂ.2ರಲ್ಲಿ ಅರಣ್ಯ ಪ್ರದೇಶಕ್ಕೆ ಲಭ್ಯವಾಗುವ ವಿಸ್ತೀರ್ಣವು 120.38 ಎಕರೆ, ಅರಣ್ಯ ಅಧಿಸೂಚನೆಯಲ್ಲಿರುವ ವಿಸ್ತೀರ್ಣ 113 ಎಕರೆಗಿಂತ ಭೌತಿಕವಾಗಿ 7.38 ಎಕರೆ ಹೆಚ್ಚಾಗಿರುತ್ತದೆ. ಇದರಿಂದ ಅರಣ್ಯ ಅಧಿಸೂಚನೆಯಲ್ಲಿನ ಗಡಿ ವಿವರಣೆ ದೋಷಪೂರಿತವಾಗಿದ್ದು, ಅರಣ್ಯ ಗಡಿಗೂ ಹಾಲಿ ಜಮೀನಿನ ಸ್ಥಿತಿಗೂ ವ್ಯತ್ಯಾಸವಿದೆ.

* ಮೂಲತ@ ಆಕಾರ ಬಂದ್​ನಂತೆ ಸರದಿ ಜಮೀನು ಖರಾಬ್​ನಲ್ಲಿ ದಾಖಲಾಗಿ 1944ರ ಅಧಿಸೂಚನೆ ಸಿ ಸೆಟಲ್​ಮೆಂಟ್​ ಹಾಗೂ 1945ರ ಡಿವಿಷನಲ್​ ಾರೆಸ್ಟ್​ ಆಫೀಸರ್​ ಅವರ ಜಿನಗಲಗುಂಟೆ ಸ್ಟೇಟ್​ ಾರೆಸ್ಟ್​ ಮ್ಯಾಪ್​ ಹೊರತುಪಡಿಸಿ ಇತರ ಯಾವುದೇ ದಾಖಲೆಗಳನ್ನು ಅರಣ್ಯ ಇಲಾಖೆಯವರು ಸಲ್ಲಿಸಿರುವುದಿಲ್ಲ.

* ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ನಿಯಮಗಳಂತೆ ಾರೆಸ್ಟ್​ ಸೆಟ್ಲಮೆಂಟ್​ ಆದ ನಂತರ ಸರ್ವೇ ದಾಖಲೆಗಳಲ್ಲಿ ದುರಸ್ತಿಯಾಗಿ ಕಂದಾಯ ದಾಖಲೆಗಳಲ್ಲಿ 1997ರವರೆಗೂ ಇಂಡೀಕರಣಗೊಂಡಿರುವುದಿಲ್ಲ. ಮೇಲಾಗಿ 1944ರ ಅಧಿಸೂಚನೆಯಾದ ಬಳಿಕ 1997ರ ವರೆಗೂ ಅರಣ್ಯ ಇಲಾಖೆಯಿಂದ ಯಾವುದೇ ಆಕ್ಷೇಪಣೆ ದಾಖಲಾಗಿರುವುದಿಲ್ಲ.

* ಸರ್ವೇ ಸಂಖ್ಯೆ 2ರಲ್ಲಿ ಅಳತೆಯಂತೆ ಒಟ್ಟು 120.38 ಎಕರೆ ಅರಣ್ಯ ಪ್ರದೇಶವಿದ್ದು, ರಮೇಶ್​ಕುಮಾರ್​ ಅವರು ಒಟ್ಟು 54.23 ಎಕರೆಯಲ್ಲಿ ಸ್ವಾಧಿನದಲ್ಲಿರುತ್ತಾರೆ. ಇನ್ನುಳಿದ 56.27 ಎಕರೆ ಪ್ರದೇಶದಲ್ಲಿ ಬೇರೆಯವರಿದ್ದು, 9.28 ಎಕರೆ ಮಾತ್ರವೇ ಅರಣ್ಯ ಜಮೀನು ಉಳಿದಿದೆ.

ಸರ್ವೇ ಸಂಖ್ಯೆ 1ರಲ್ಲಿ ಆಕಾರ ಬಂದ್​ನಂತೆ 315.32 ಎಕರೆ ವಿಸ್ತೀರ್ಣವಿದ್ದು, ಕೆ.ಆರ್​.ರಮೇಶ್​ ಕುಮಾರ್​ ಅಳತೆಯಂತೆ 6 ಎಕರೆ ಸ್ವಾಧಿನದಲ್ಲಿರುವುದು ಕಂಡುಬಂದಿರುತ್ತದೆ.

* ಸದರಿ ಸರ್ವೇ ನಂಬರ್​ನಲ್ಲಿ ಭೂ ಮಂಜೂರಾತಿಗಾಗಿ ಅರ್ಜಿ ಸಲ್ಲಿಕೆಯಾಗಿರುವಂತೆ, ಭೂ ಮಂಜೂರಾತಿ ನಿಯಮಗಳನ್ವಯ ವಿವಿಧ ವರ್ಷಗಳಲ್ಲಿ ಮಂಜೂರಾಗಿರುತ್ತದೆ. ನಂತರದಲ್ಲಿ ಖರೀದಿ ಪ್ರಕ್ರಿಯೆಗಳು ನಡೆದಿರುವುದು ಕಂಡುಬಂದಿರುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

* ವಿಚಾರಣೆ ನಂತರ ಮುಂದಿನ ಕ್ರಮ

ಫೆ.6ರಂದು ವಿಚಾರಣೆ ಇದ್ದು, ನ್ಯಾಯಾಲಯದ ತೀರ್ಪಿನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಅಲ್ಲದೆ ಸರ್ಕಾರಕ್ಕೆ ವರದಿ ನೀಡಿದ್ದು, ವರದಿಯಂತೆ ಸರ್ಕಾರ ಹಾಗೂ ನ್ಯಾಯಾಲಯದ ತೀರ್ಪಿನ ಅನ್ವಯ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್​.ರವಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net