

ಕಿರುವಾರ ಎಸ್.ಸುದರ್ಶನ್ ಕೋಲಾರ
ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜಿಂಗಾಲಕುಂಟೆ ಅರಣ್ಯ ಜಮೀನು ಜಂಟಿ ಸರ್ವೇ ಕಾರ್ಯ ಕುರಿತು, ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರು (ಆರ್‌ಸಿ) ಹೊರಡಿಸಿರುವ ಆದೇಶ ಗೊಂದಲಕ್ಕೆ ಕಾರಣವಾಗಿದೆ.
ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಹೊಸಹುಡ್ಯ ಸ.ನಂ.1 ಮತ್ತು ೨ರಲ್ಲಿ 62.39 ಎಕರೆ ಜಾಗವನ್ನು ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೇ ಕಾರ್ಯ ನಡೆಸಲು ಹೈಕೋರ್ಟ್ ಆದೇಶಿಸಿದ್ದು, ಅದರಂತೆ ಎರಡು ಬಾರಿ ದಿನಾಂಕ ನಿಗದಿಪಡಿಸಿ ಕಾರ್ಯವನ್ನು ಮುಂದೂಡಲಾಗಿದೆ.
ಮೊದಲು ನ.6ರಂದು ನಿಗದಿಪಡಿಸಲಾಗಿತ್ತು. ಆಗ ಡಿಡಿಎಲ್‌ಆರ್ ತಾಂತ್ರಿಕ ಕಾರಣದಿಂದ ಮುಂದೂಡಿದ್ದರು. ನಂತರ ಕಂದಾಯ ಹಾಗೂ ಅರಣ್ಯ ಇಲಾಖೆಯವರು ಚರ್ಚಿಸಿಯೇ ಡಿ.20ಕ್ಕೆ ನಿಗದಿಪಡಿಸಲಾಗಿತ್ತು. ಎರಡೂ ಇಲಾಖೆಯವರು ಸಿದ್ಧತೆ ಕೈಗೊಂಡಿದ್ದರು. ಇದರ ಬೆನ್ನಲೇ ಪ್ರಾದೇಶಿಕ ಆಯುಕ್ತರೂ ಆಗಿರುವ ನೋಡಲ್ ಅಧಿಕಾರಿ(ಆರ್‌ಸಿ) ಪ್ರವೇಶಿಸಿ ಆದೇಶಗಳನ್ನು ಹೊರಡಿಸಿ, ಕಂದಾಯ ಅಽಕಾರಿಗಳ್ಯಾರೂ ಜಂಟಿ ಸರ್ವೇಗೆ ಹಾಜರಾಗದಂತೆ ಸೂಚಿಸಿದ್ದರು. ಇದು ಅರಣ್ಯ ಇಲಾಖಾಽಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಆದರೂ ಅರಣ್ಯ ಇಲಾಖೆಯ ಉಪ ಸಂರಕ್ಷಣಾಧಿಕಾರಿ(ಡಿಸಿಎಫ್) ಏಡುಕೊಂಡಲು ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಮಹಜರು ಮಾಡಿ ಸರ್ಕಾರಕ್ಕೆ ಕಳುಹಿಸಲು ವರದಿ ಸಿದ್ಧಪಡಿಸಿದ್ದಾರೆ. ಸರ್ವೇ ಕಾರ್ಯಕ್ಕೆ ಕಂದಾಯ ಇಲಾಖೆ ಸಿದ್ಧವಿದ್ದರೂ ಪ್ರಾದೇಶಿಕ ಆಯುಕ್ತರು ಮಧ್ಯ ಪ್ರವೇಶ ಮಾಡಿ ವ್ಯಾಪ್ತಿ ಮೀರಿ ಅಧಿಕಾರ ಚಲಾಯಿಸಿದ್ದಾರೆ. ಇದು ಜಿಲ್ಲಾಮಟ್ಟದ ಅಽಕಾರವನ್ನು ಮೊಟಕುಗೊಳಿಸಿದಂತಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ರಮೇಶ್ ಕುಮಾರ್ ಸ್ವಾಧೀನದಲ್ಲಿರುವ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಇಬ್ಬರ ನಡುವೆ ಮಾಲೀಕತ್ವಕ್ಕಾಗಿ ಕಾನೂನು ಹೋರಾಟ ನಡೆದಿದ್ದು, ಜಂಟಿ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ 2013ರ ಜೂನ್ 11ರಂದು ಹೈಕೋರ್ಟ್ ಆದೇಶಿಸಿದೆ. ಅದರಂತೆ 2014ರಲ್ಲಿ ಅಂದಿನ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ಸರ್ವೇ ನಡೆಸಿ ವರದಿ ಸಿದ್ಧಪಡಿಸಿದ್ದು, ಇದರ ಬಗ್ಗೆ ಅರಣ್ಯ ಇಲಾಖೆೆ ಅಕ್ಷೇಪ ವ್ಯಕ್ತಪಡಿಸಿದೆ. ಆದ್ದರಿಂದ ಮತ್ತೊಮ್ಮೆ ಜಂಟಿ ಸರ್ವೇ ನಡೆಸಲು ಕೋರ್ಟ್ ಸೂಚಿಸಿದೆ.
ನ್ಯಾಯಾಲಯದ ಆದೇಶದಂತೆ ಜಂಟಿ ಸರ್ವೇಗೆ ಕ್ರಮವಹಿಸಿದ್ದರೂ ಪ್ರಾದೇಶಿಕ ಆಯುಕ್ತರು ಮಧ್ಯ ಪ್ರವೇಶ ಮಾಡಿರುವುದು ನ್ಯಾಯಾಲಯದ ಆದೇಶ ಉಲ್ಲಂಘಿಸಿದಂತಾಗಿದೆ ಎಂಬುದು ಅಽಕಾರಿಗಳ ನಡುವೆ ಚರ್ಚೆಗೆ ಗ್ರಾಸವಾಗಿದೆ.
ಬಾಕ್ಸ್
ಪ್ರಾದೇಶಿ ಆಯುಕ್ತರ ಆದೇಶಕ್ಕೆ ಅಸಮಾಧಾನ
ಡಿ.20ರಂದು ಜಂಟಿ ಸರ್ವೇಗೆಂದು ಅರಣ್ಯ ಇಲಾಖಾಽಕಾರಿಗಳು ಹೊಸಹುಡ್ಯ ಅರಣ್ಯ ಪ್ರದೇಶಕ್ಕೆ ತೆರಳಿ ಕಂದಾಯ ಅಧಿಕಾರಿಗಳ ಆಗಮನಕ್ಕಾಗಿ ಕಾಯುತ್ತಿದ್ದರು. ಆನಂತರ ಕಂದಾಯ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಆಯುಕ್ತರ ಆದೇಶದ ಮೇರೆಗೆ ಯಾರೊಬ್ಬರೂ ಆಗಮಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಅರಣ್ಯ ಇಲಾಖೆಯ ಅಽಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಸಲ್ಲಿಸಲು ವರದಿ ಸಿದ್ಧಪಡಿಸಿದ್ದಾರೆ.
ವರದಿಯಲ್ಲಿ ಆಯುಕ್ತರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗ ಮಧ್ಯ ಪ್ರವೇಶ ಮಾಡಿರುವ ಆಯುಕ್ತರು, ನ್ಯಾಯಾಲಯ ೨೦೧೩ರಲ್ಲೇ ಆದೇಶ ಹೊರಡಿಸಿದ್ದರೂ ಅಂದಿನಿಂದ ಯಾಕೆ ತಲೆ ಕೆಡಿಸಿಕೊಂಡಿರಲಿಲ್ಲ ಎಂದು ಅರಣ್ಯ ಅಽಕಾರಿಗಳು ಪ್ರಶ್ನಿಸಿದ್ದಾರೆ.
ಪ್ರತಿವಾದಿಯಂತೆ ವರ್ತನೆ..?
ಡಿ.20ರಂದು ಸರ್ವೇ ನಡೆಸಲು ಎದುರುದಾರರಿಗೆ ಅರಣ್ಯ ಇಲಾಖೆ ನೀಡಿರುವ ನೊಟೀಸ್‌ಗೆ ಪ್ರಾದೇಶಿಕ ಆಯುಕ್ತರು ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕಂದಾಯ ಅಧಿಕಾರಿಗಳು ಹಾಜರಾಗದಂತೆ ಆದೇಶಿಸಿದ್ದು, ಇದು ಅರಣ್ಯ ಇಲಾಖಾಧಿಕಾರಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಡಿಸಿಎಫ್ ಸಮಿತಿಯಿಂದ ದೂರ
2014ರಲ್ಲಿ ಜಿಲ್ಲಾಧಿಕಾರಿ ಸಿದ್ಧಪಡಿಸಿರುವ ವರದಿಯನ್ನು ಪರಿಗಣನೆಗೆ ತೆಗೆದುಕೊಂಡು ಸರ್ವೇ ನಡೆಸಬೇಕು. ಜತೆಗೆ ಡಿಸಿ, ಎಸಿ, ತಹಸೀಲ್ದಾರ್, ಸರ್ವೇಯರ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ತಂಡ ರಚಿಸಿದ್ದು, ಮೊದಲ ಹಂತದಲ್ಲಿ ಪರಿಶೀಲನೆ ನಡೆಸಬೇಕು. ಆನಂತರ ಸರ್ಕಾರದ ಕಾರ್ಯದರ್ಶಿಗೆ ಕಳುಹಿಸಬೇಕು ಎಂದು ಸಲಹೆ ನೀಡಿದ್ದಾರೆ. ಈ ರೀತಿ ಮಾಡಿರುವುದು ಕಾನೂನು ಬಾಹಿರವಾಗಿದೆ ಎಂಬುದು ಅರಣ್ಯ ಇಲಾಖಾಧಿಕಾರಿಗಳ ವಾದವಾಗಿದೆ. ಇದರಲ್ಲಿ ಡಿಸಿಎಫ್ ಅವರನ್ನು ದೂರ ಇಡಲಾಗಿದೆ.
ತಲೆದಂಡವಾಗುವ ಸಾಧ್ಯತೆ
ವಿವಾದಿತ ಜಮೀನು ಗಡಿಯನ್ನು ಗುರುತಿಸಲು ಕಂದಾಯ ಮತ್ತು ಅರಣ್ಯ ಸರ್ವೇ ಕಾರ್ಯ ನಡೆಸುವ ಅಗತ್ಯವಿದೆ. ಅದ್ದರಿಂದ ಅರಣ್ಯ ಇಲಾಖೆಯ ಪ್ರಯತ್ನವೂ ಮುಂದುವರಿದಿದ್ದು ಜ.೨ರಂದು ಸರ್ವೇ ಕಾರ್ಯ ನಡೆಯಬೇಕಿದೆ. ಅಂದು ಏನಾದರು ತಪ್ಪಿದರೆ ಯಾವುದೇ ಇಲಾಖೆಯ ಅಧಿಕಾರಿಗಳು ತಲೆದಂಡವಾಗುವ ಸಾಧ್ಯತೆಯಿದೆ.
ಅಧಿಕಾರಿಗಳ ಎತ್ತಂಗಡಿಗೆ ಷಡ್ಯಂತರ
ರಮೇಶ್ ಕುಮಾರ್ ಅವರು ಪ್ರಭಾವಿ ರಾಜಕಾರಣಿಯಾಗಿದ್ದು, ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಸರ್ವೇಯನ್ನು ಮುಂದೂಡಿಕೊಂಡು ಬಂದಿದ್ದಾರೆ. ಅಲ್ಲದೆ ಪ್ರಾದೇಶಿಕ ಆಯುಕ್ತರ ಮಧ್ಯಪ್ರವೇಶಕ್ಕೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಕಾರಣರಾಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ. ಸರ್ವೇ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಿಲ್ಲಾಧಿಕಾರಿ ಅಕ್ರಂ ಪಾಷ ಹಾಗೂ ಉಪ ಅರಣ್ಯ ಸಂರಕ್ಷಣಾ ಏಡುಕೊಂಡಲು ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿಸಲು ಸರ್ಕಾರದ ಮಟ್ಟದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಈ ಇಬ್ಬರು ಅಧಿಕಾರಿಗಳು ಜಿಲ್ಲೆಯಿಂದ ಎತ್ತಂಗಡಿಯಾದರೆ ಆನಂತರ ರಮೇಶ್ ಕುಮಾರ್ ಅವರ ಪರವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು ಎಂಬುದು ಆರ್‌ಸಿ ಅಭಿಪ್ರಾಯವಾಗಿದೆ ಎಂಬ ಆರೋಪ ಇದೆ.
ಕೋಟ್
ಅರಣ್ಯ ಕಾಯ್ದೆಗಳು ಬಹಳ ಕಠಿಣವಾಗಿವೆ, ಅಲ್ಲದೆ ಕಾನೂನು ಮುಂದೆ ಯಾರೂ ದೊಡ್ಡವರಲ್ಲ. ಪ್ರತಿಯೊಬ್ಬರೂ ಪಾಲನೆ ಮಾಡಲೇಬೇಕು. ತಡ ಮಾಡಿದರೆ ಉಲ್ಲಂಘಿಸಿದAತಾಗುತ್ತದೆ. ಜಿಂಗಾಲಕುAಟೆ ಅರಣ್ಯ ಜಮೀನು ಜಂಟಿ ಸರ್ವೇ ಆಗಿ ಅರಣ್ಯ ಜಮೀನಿಗೆ ಸೇರಿದ್ದು ಎಂದು ಕಂಡುಬಂದರೆ ಕೂಡಲೇ ಒತ್ತುವರಿ ತೆರವಿಗೆ ಕ್ರಮವಹಿಸಲಾಗುವುದು.
- ಏಡುಕೊಂಡಲು, ಡಿಸಿಎಫ್, ಕೋಲಾರ