ಬೆಂಗಳೂರು:
ಬೇಲೂರಿನ ಬಳಿ ಮರ ಕಡಿದಿದ್ದ ಪ್ರಕರಣದಲ್ಲಿ ನಿಜವಾಗಿ ಯಾರನ್ನು ಹೊಣೆ ಮಾಡಬೇಕು ಎನ್ನುವ ಜಿಜ್ಞಾಸೆ ಅರಣ್ಯ ಇಲಾಖೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ನಮ್ಮ ಗಮನಕ್ಕೆ ಬಂದ ತಕ್ಷಣವೇ ಈ ಬಗ್ಗೆ ತನಿಖೆ ಮಾಡಿ ವರದಿ ನೀಡಲು ವಲಯ ಅರಣ್ಯಾಧಿಕಾರಿಗೆ ಸೂಚಿಸಲಾಗಿದೆ. ಅವರ ವರದಿ ಮೇಲೆ ಡಿಎ್ಒ ಕ್ರಮ ವಹಿಸುವುದು ಸಹಜ ಪ್ರಕ್ರಿಯೆ. ಆದರೆ, ಇದರಲ್ಲಿ ಡಿಎ್ಒ ಅವರನ್ನು ಹೊಣೆ ಮಾಡಿ ಅಮಾನತ್ತು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಐಎ್ಎಸ್ ಅಧಿಕಾರಿಗಳು ಅರಣ್ಯ ಸಚಿವರ ಬಳಿ ವಾದ ಮಂಡಿಸಿದ್ದಾರೆ.
ಗುರುತರ ಮತ್ತು ನಿರ್ದಿಷ್ಟ ಕಾರಣಗಳಿಲ್ಲದೆ ಈ ರೀತಿ ಅಮಾನತ್ತು ಮಾಡಿದರೆ ಮೇಲ್ಮಟ್ಟದ ಅಧಿಕಾರಿಗಳ ಮನೋಸ್ಥೈರ್ಯವನ್ನು ಕುಗ್ಗಿಸಿದಂತಾಗುತ್ತದೆ. ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವರ ಮೇಲೆ ಒತ್ತಡ ಹೇರಿದ್ದರೂ ಪ್ರಯೋಜನವಾಗಿರಲಿಲ್ಲ.
ಮತ್ತೊಂದೆಡೆ ವಲಯ ಅರಣ್ಯಾಧಿಕಾರಿಗಳ ನಿಯೋಗ (ಆರ್‌ಎ್ಒ) ಕೂಡ ಅರಣ್ಯ ಸಚಿವರನ್ನು ಭೇಟಿ ಮಾಡಿ ನಾವು ಮೇಲಾಧಿಕಾರಿ ಹೇಳಿದ್ದಂತೆ ಕೇಳಿದ್ದೇವೆ. ಈ ತನಕ ಹೀಗೆಯೇ ನಡೆದುಕೊಂಡು ಬಂದಿದೆ. ಇದು ತಪ್ಪು ಎಂದರೆ ನಾವು ಯಾರ ಮಾತನ್ನು ಕೇಳಬೇಕು? ನೀವೆ ಹೇಳಿ? ಎಂದು ಅವಲತ್ತುಕೊಂಡಿದ್ದಾರೆ.
ಕ್ಷೇತ್ರದಲ್ಲಿ ಗಾರ್ಡ್‌ಗಳು ಮಾಹಿತಿ ನೀಡಬೇಕು. ತಾಲೂಕು ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಿ ವರದಿ ನೀಡಬೇಕು. ಏಕಾಏಕಿ ಆರ್‌ಎ್ಒ ಮತ್ತು ಡಿಎ್ಒ ಹೊಣೆ ಮಾಡಿರುವುದು ಸರಿಯಲ್ಲ ಎನ್ನುವುದು ಹಿರಿಯ ಅರಣ್ಯಾಧಿಕಾರಿಗಳ ವಾದ.
ಎರಡೂ ಕಡೆಯ ವಾದಗಳನ್ನು ಕೇಳಿಸಿಕೊಂಡಿರುವ ಸಚಿವ ಈಶ್ವರ ಖಂಡ್ರೆ ಅವರು, ಈಗಾಗಲೇ ಸರ್ಕಾರ ತೀರ್ಮಾನ ತೆಗೆದುಕೊಂಡು ಆಗಿದೆ. ಅಧಿಕಾರಿಗಳು ಲೋಪ ಮಾಡದೆ, ಎಚ್ಚರಿಕೆಯಿಂದ ಇರಬೇಕು ಎನ್ನುವ ಸೂಚನೆ ಇದು. ನಿಮ್ಮ ಅಹವಾಲು ಹೇಳಿದ್ದೀರಿ. ಮುಂದೇನು ಎನ್ನುವುದನ್ನು ಚರ್ಚಿಸಿ ನಿರ್ಣಯಿಸಲಾಗುವುದು ಎಂದು ಸಮಾಧಾನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೋಮಾಳಕ್ಕೆ ಸೇರಿರುವ ಜಾಗದಲ್ಲಿ ಮರಗಳನ್ನು ಕಡಿಯಲಾಗಿದೆ. ಶುಂಠಿ ಬೆಳೆಯುವ ನೆಪವೊಡ್ಡಿ ಬೆಲೆಬಾಳುವ ಮರಗಳನ್ನು ಕಡಿಯಲಾಗಿದೆ ಎನ್ನುವ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ್ ಸಹೋದರನನ್ನು ಬಂಧಿಸಿದ್ದರಿಂದ ಈ ಪ್ರಕರಣ ಗಂಭೀರ ತಿರುವು ಪಡೆದುಕೊಂಡಿತ್ತು.