

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಸೇವೆಗೆ ಚಾಲನೆ ನೀಡಿದ ಸಚಿವರು, ಅದರ ಕಾರ್ಯ ನಿರ್ವಹಣೆ ಬಗ್ಗೆ ವಿವರಣೆ ನೀಡಿದರು.
ಇವತ್ತಿನ ಅಗತ್ಯಕ್ಕೆ ಅನುಗುಣವಾಗಿ ಬದಲಾಗಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿ ಸುಧಾರಣೆ ತರಲಾಗುತ್ತಿದೆ. ದಿನದಿಂದ ದಿನಕ್ಕೆ ಅರಣ್ಯ ಅಪರಾಧ ಹೆಚ್ಚಾಗುತ್ತಿದೆ. ಇಡೀ ರಾಜ್ಯದಾದ್ಯಂತ ಶ್ರೀಮಂತ ಹಸಿರು ಹೊದಿಕೆ ಇದ್ದು ಒತ್ತುವರಿಯಾಗುತ್ತಿದೆ. ಒತ್ತುವರಿ ತೆರವಿಗೆ ವಿರೋಧ ಎದುರಿಸುತ್ತಿದ್ದೇವೆ. ಒಂದಿಂಚೂ ಸಹ ಒತ್ತುವರಿ ಆಗಬಾರದೆಂಬುದು ನಮ್ಮ ಪ್ರಯತ್ನ ನಡೆದಿದೆ ಎಂದರು.
ಇದೀಗ ಆನ್‌ಲೈನ್ ಎಫ್‌ಐಆರ್ ಗರುಡಾಕ್ಷಿ ವ್ಯವಸ್ಥೆ ರೂಪಿಸಲಾಗಿದೆ. ಅರಣ್ಯ ಅಪರಾಧ ತಡೆಯಲು, ಅಪರಾಧಿಗಳುಗೆ ಶಿಕ್ಷೆ ಖಾತ್ರಿಪಡಿಸಲು, ಅರಣ್ಯ ಕಾನೂನು ಚೌಕಟ್ಟು ಬಲಪಡಿಸಲು ಈ ಹೊಸ ವ್ಯವಸ್ಥೆ ಸಹಕಾರಿಯಾಗುತ್ತದೆ ಎಂದು ವಿವರಿಸಿದರು.
ರಾಜ್ಯದ ಐದು ಕಡೆ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಕ್ಷೇತ್ರ ಮಟ್ಟದ ಫೀಡ್ ಬ್ಯಾಕ್ ಪಡೆದು ಇನ್ನಷ್ಟು ಬಲಪಡಿಸಿ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುತ್ತದೆ ಎಂದು ಹೇಳಿದರು.
ಅರಣ್ಯ ಇಲಾಖೆಯಲ್ಲಿ ಗರುಡಾಕ್ಷಿ ಮೈಲಿಗಲ್ಲಾಗಲಿದೆ. ಇಷ್ಟು ದಿನಗಳವರೆಗೆ ಕೈ ಬರಹದ ದಾಖಲೀಕರಣ ಆಗುತ್ತಿತ್ತು. ಮೇಲ್ವಿಚಾರಣೆ ಕಷ್ಟವಾಗುತ್ತಿತ್ತು. ಚಾರ್ಜ್ ಶೀಟ್ ಬಗ್ಗೆ ದೂರು ಕೊಟ್ಟವರಿಗೂ ಸಂದೇಶ ಹೋಗಲಿದೆ. ಮುಂದಿನ ದಿನಗಳಲ್ಲಿ ದೂರುದಾರರಿಗೂ ಲಾಗಿನ್ ಮಾಡಿಕೊಳ್ಳಲು ಅವಕಾಶ ಕೊಡುವ ಚಿಂತನೆಇದೆ. ಇದರಿಂದ ಅವರೂ ಸಹ ಪ್ರಕರಣದ ಹಂತವನ್ನು ನೋಡಬಹುದಾಗಿದೆ ಎಂದರು.
ಯಾವ ವಲಯದಲ್ಲಿ ಹೆಚ್ಚು ಆನ್ ಲೈನ್ ಎಫ್ ಐ ಆರ್ ದಾಖಲಿಸುತ್ತಾರೋ ಆ ಭಾಗದ ಆರ್ ಎಫ್ ಒ ಗಳನ್ನು ಬಡ್ತಿ ವೇಳೆ ದಕ್ಷತೆ ರೂಪದಲ್ಲಿ ಪರಿಗಣಿಸುವ ಚಿಂತನೆಯೂ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ 64 ಸಾವಿರ ಅರಣ್ಯ ಅಪರಾಧ ಪ್ರಕರಣ ಇದೆ. ಅನೇಕ ಕಡೆ ಚಾರ್ಜ್ ಶೀಟ್ ಹಾಕಿಲ್ಲ ಎಂಬ ದೂರು ಕೂಡ ಇದೆ. ಆನ್ ಲೈನ್ ವ್ಯವಸ್ಥೆಯಿಂದ ಇಂತಹ ಬೆಳವಣಿಗೆಗೆ ಅವಕಾಶ ಇರಲ್ಲ ಎಂದು ಅಭಿಪ್ರಾಯಪಟ್ಟರು.
ಗರುಡಾಕ್ಷಿಯಿಂದ ವರದಿಗಳು ಸ್ವಯಂ ಸೃಜನೆ ಕೊಳ್ಳಲು ಅವಕಾಶವಾಗಲಿದೆ. ನಾಲ್ಕು ಮಾಡ್ಯೂಲ್ ಅಳವಡಿಸಲಾಗಿದೆ. ತನಿಖೆ, ವರದಿ, ವಿಶ್ಲೇಷಣೆ ಹೀಗೆ ವಿವಿಧ ವರ್ಗಗಳಿರಲಿವೆ ಎಂದರು.
ಈಗಾಗಲೇ ನಲವತ್ತು ಸಾವಿರ ಪ್ರಕರಣ ಗಣಕೀಕರಣವಾಗಿದೆ. ಉಳಿದವು ಶೀಘ್ರ ಗಣಕೀಕರಣ ಆಗಲಿದೆ ಎಂದ ಅವರು ದೂರುದಾರರು ಆರ್ ಎಫ್ ಒ ಬಳಿ ಹೋಗಿ ದೂರು ದಾಖಲಿಸಬಹುದು. ಮುಂದೆ ದೂರುದಾರರು ನೇರವಾಗಿ ದೂರು ಸಲ್ಲಿಸುವ ಅವಕಾಶ ಬರಲಿದೆ ಎಂದರು.
ಅರಣ್ಯ ಅಪರಾಧಗಳನ್ನು ಕಾಗ್ನಿಜಬಲ್ ಅಪರಾಧ ಎಂದು ಪರಿಗಣಿಸಲು ವಿಧಾನಸಭೆಯಲ್ಲಿ ಚರ್ಚೆಯಾಗಬೇಕು. ಕಾನೂನು ಬಲಗೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.