ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ: ಈಶ್ವರ ಖಂಡ್ರೆ

ESHWAR KANDRE congress
Published on

ಬೆಂಗಳೂರು:

ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವಂತೆ ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಹೊಸದಾಗಿ ಅರಣ್ಯ ಒತ್ತುವರಿಗೆ ಅವಕಾಶ ನೀಡಕೂಡದು ಎಂದು ಸ್ಪಷ್ಟ ಸೂಚನೆ ನೀಡಿದರು.

ರಾಜ್ಯದಲ್ಲಿ ಶೇ.33 ಇರಬೇಕಾಗಿದ್ದ ಹಸಿರು ಹೊದಿಕೆ 22ರಷ್ಟು ಇದೆ. ಆದ್ದರಿಂದ ಇರುವ ಅರಣ್ಯ ಕಾಪಾಡಿಕೊಳ್ಳುವುದಲ್ಲದೆ, ಒತ್ತುವರಿ ಮಾಡುವುದನ್ನು ತಡೆಯಬೇಕು ಎಂದರು.

ಈಗಾಗಲೇ ಗುರುತಿಸಲಾಗಿರುವ ಅರಣ್ಯ ಗಡಿಯೊಳಗೆ ಒತ್ತುವರಿ ಆಗದಂತೆ ಕರ್ನಾಟಕ ರಾಜ್ಯ ದೂರ ಸಂವೇದಿ ಆನ್ವಯಿಕ ಕೇಂದ್ರ (ಓಖ್ಕಖಅಇ) ಸಹಯೋಗದಲ್ಲಿ ಸಿದ್ಧಪಡಿಸಲಾಗಿರುವ ಅರಣ್ಯ ಬದಲಾವಣೆ ಮುನ್ನೆಚ್ಚರಿಕಾ ವ್ಯವಸ್ಥೆಯನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂದರು.

2015ರ ಪೂರ್ವದಲ್ಲಿ ಜೀವನೋಪಾಯಕ್ಕಾಗಿ 3 ಎಕರೆಗಿಂತ ಕಡಿಮೆ ಭೂಮಿ ಒತ್ತುವರಿ ಮಾಡಿರುವ ಹಾಗೂ ಅರಣ್ಯ ಹಕ್ಕು ಕಾಯಿದೆ ಅಡಿ ಅರ್ಜಿ ಬಾಕಿ ಇರುವ ಮತ್ತು ನ್ಯಾಯಾಲಯದ ತಡೆ ಇರುವ ಪ್ರಕರಣ ಹೊರತುಪಡಿಸಿ ತೆರವಿಗೆ ಕ್ರಮ ವಹಿಸುವಂತೆ ಸೂಚಿಸಿದರು.

ಕಾಡ್ಗಿಚ್ಚು ಕಾಣಿಸಿಕೊಂಡಾಗ ಸಕಾಲದಲ್ಲಿ ಮಾಹಿತಿ ನೀಡುವ ದೂರಸಂವೇದಿ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮಾದರಿಯಲ್ಲೇ ಹೊಸ ಅರಣ್ಯ ಒತ್ತುವರಿ ಆದಾಗ ಅಥವಾ ಅರಣ್ಯ ಸ್ವರೂಪ ಬದಲಾದಾಗ ಸಂಬಂಧಿತ ವಲಯ ಅರಣ್ಯಾಧಿಕಾರಿಗೆ ಮಾಹಿತಿ ರವಾನಿಸುವ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ -ಓಖ್ಕಖಅಇ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಪ್ರಸ್ತುತ ಕೃತಕ ಬುದ್ಧಿಮತ್ತೆ ಮತ್ತು ಉಪಗ್ರಹ ಚಿತ್ರ ಆಧಾರಿತವಾಗಿ ಸಕಾಲದಲ್ಲಿ ಅರಣ್ಯ ಸ್ವರೂಪ ಬದಲಾವಣೆಯ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗಿದೆ. ಕಳೆದ ಜುಲೈ 1ರಿಂದ ನ.3ರವರೆಗೆ 167 ಎಚ್ಚರಿಕೆ ಸಂದೇಶ ಬಂದಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ ಮತ್ತು ಕ್ರಮ ವಹಿಸಲಾಗಿದೆ.

ಅರಣ್ಯ ಒತ್ತುವರಿಯಾದರೆ, ಅರಣ್ಯದ ಗಡಿಯೊಳಗೆ ಮರ ಕಡಿತಲೆಯಾದರೆ ಆ ಬಗ್ಗೆ ಇಲಾಖೆಗೆ ಸಂದೇಶ ಬರುತ್ತದೆ. ಹಸಿರು ಹೊದಿಕೆಯಲ್ಲಿ21 ದಿನಗಳಲ್ಲಾದ ಬದಲಾವಣೆಯನ್ನು ಊಟ್ಟಛಿಠಿ ಇಟಛ್ಟಿ ಇಚ್ಞಜಛಿ ಅ್ಝಛ್ಟಿಠಿ ಖಠಿಛಿಞ ಗುರುತಿಸುತ್ತದೆ. ಈ ವ್ಯವಸ್ಥೆಯು ಕ್ಷೇತ್ರಮಟ್ಟದ ಅಧಿಕಾರಿಗಳಿಗೆ ಅರಣ್ಯ ವ್ಯಾಪ್ತಿಯ ಬದಲಾವಣೆಯನ್ನು ಸಕಾಲಿಕವಾಗಿ ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net