ಅರಣ್ಯ ವಾಸಿಗಳಿಗೆ ವಿನಾಯಿತಿಗೆ ಅವಕಾಶ

Eshwar khandre
Published on

ಬೆಂಗಳೂರು: ಅರಣ್ಯದೊಳಗೆ ಜಾನುವಾರು ಮೇಯಿಸಲು ನಿಷೇಧಿಸುವ ಕಾನೂನಿನಲ್ಲಿ ಅರಣ್ಯ ವಾಸಿಗಳಿಗೆ ವಿನಾಯಿತಿ ಕೊಡಲು ಅವಕಾಶವಿದೆ. ನೆರೆ ರಾಜ್ಯಗಳಿಂದ ಜಾನುವಾರುಗಳನ್ನು ತಂದು ನಮ್ಮ ರಾಜ್ಯದ ಅರಣ್ಯದಲ್ಲಿ ಬಿಡುತ್ತಿರುವುದು ಗೊತ್ತಾಗಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಂಬಂಧ ಚರ್ಚೆ ನಡೆಯುತ್ತಿದ್ದು, ಯಾವುದೂ ಅಂತಿಮವಾಗಿಲ್ಲ ಎಂದು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.

ಸಂರಕ್ಷಿತ ಅರಣ್ಯ, ವನ್ಯಜೀವಿಧಾಮದಲ್ಲಿ ಸಾವಿರಾರು ದನಕರುಗಳು ಮೇಯಲು ಬರುವುದರಿಂದ ವನ್ಯಜೀವಿಗಳಿಗೆ ತೊಂದರೆ ಆಗುತ್ತಿದೆ. ಸಸ್ಯಸಂಕುಲ ನಾಶವಾಗುತ್ತಿವೆ. ಹಾಗಾಗಿ ಅರಣ್ಯದೊಳಗೆ ಜಾನುವಾರಗಳನ್ನು ನಿಷೇಧಿಸುವ ಕುರಿತು ಚಿಂತನೆ ನಡೆದಿದೆ ಎಂದು ಖಂಡ್ರೆ ತಿಳಿಸಿದ್ದಾರೆ.

ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಹೂಗ್ಯಂ ವಲಯದಲ್ಲಿ ಮೃತ ಹಸುವಿಗೆ ವಿಷಹಾಕಿ ತಾಯಿ ಹುಲಿ ಮತ್ತು 4 ಹುಲಿ ಮರಿಗಳನ್ನು ಕೊಂದಿದ್ದರು. ಆದರಿಂದ ಕಾಯ್ದೆ ಪ್ರಕಾರ ಅರಣ್ಯದೊಳಗೆ ಜಾನುವಾರಗಳನ್ನು ನಿಷೇಧ ಮಾಡಬೇಕೆಂದು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net