ಸಾರ್ವಜನಿಕ ಸಹಭಾಗಿತ್ವದಲ್ಲಿ ಅರಣ್ಯ ಅಭಿವೃದ್ಧಿ

11hos1p-forest
ಹೊಸನಗರದ ವಲಯ ಅರಣ್ಯ ಕಚೇರಿಯಲ್ಲಿ ಅರಣ್ಯ ಹುತಾತ್ಮರ ದಿನಾಚರಣೆ ಅಂಗವಾಗಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಲಾಯಿತು. ಮೋಹನ್‌ಕುಮಾರ್, ಸಂತೋಷ್ ಮಲ್ಲನಗೌಡರ್, ಮೋಹನ್ ಎಸ್.ನಗರ ಇತರರಿದ್ದರು.
Published on

ಹೊಸನಗರ: ಅರಣ್ಯ ರಕ್ಷಣೆಯಿಂದ ಇಡೀ ಜಗತ್ತಿನ ಉಳಿವು ಸಾಧ್ಯ. ಸಾರ್ವಜನಿಕ ಸಹಭಾಗಿತ್ವದಲ್ಲಿ ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ಆಗಬೇಕು ಎಂದು ಎಸಿಎಫ್ ಮೋಹನಕುಮಾರ್ ಹೇಳಿದರು.

ತಾಲೂಕಿನ ನಗರ ವಲಯ ಅರಣ್ಯ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಮಾರಕಕ್ಕೆ ಗೌರವ ಸಲ್ಲಿಸಿ ಮಾತನಾಡಿ, ಅರಣ್ಯ ಸಂರಕ್ಷಣೆಗಾಗಿ ಜೀವದ ಹಂಗು ತೊರೆದು ಹೋರಾಡಿ ಹುತಾತ್ಮರಾದವರ ಅನೇಕ ನಿದರ್ಶನಗಳು ಅರಣ್ಯ ಇಲಾಖೆಯಲ್ಲಿವೆ. ಅಂತಹ ಸೇವೆಯಲ್ಲಿ ಮಡಿದ ಸೇನಾನಿಗಳನ್ನು ಸದಾ ಸ್ಮರಿಸುವುದು ನಮ್ಮ ಜವಾಬ್ದಾರಿ ಎಂದರು.
ನಗರ ವಲಯ ಅರಣ್ಯಾಧಿಕಾರಿ ಸಂತೋಷ ಮಲ್ಲನಗೌಡರ್, ಹೊಸನಗರ ವಲಯ ಅರಣ್ಯಾಧಿಕಾರಿ ಮೋಹನ ಎಸ್.ನಗರ, ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ವನಪಾಲಕರು, ಅರಣ್ಯ ವೀಕ್ಷಕರು, ಅರಣ್ಯ ನೆಡುತೋಪು ವೀಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net