ಅರಣ್ಯ ಸಂರಕ್ಷಣೆ ಬೆಲೆ ಕಟ್ಟಲಾಗದ ಸೇವೆ

hos forest
ಹೊಸನಗರ ತಾಲೂಕಿನ ನಗರದಲ್ಲಿ ನಡೆದ ಅರಣ್ಯ ಹುತಾತ್ಮ ದಿನಾಚರಣೆಯಲ್ಲಿ ನ್ಯಾಯಾಧೀಶ ಮಾರುತಿ ಶಿಂಧೆ, ಎಸಿಎ್ ಮೋಹನಕುಮಾರ್, ಆರ್‌ಎಫ್‌ಒ ಸಂತೋಷ್ ಮಲ್ಲನ ಗೌಡ ಮತ್ತಿತರರು ಇದ್ದರು.
Published on

ಹೊಸನಗರ: ಪರಿಸರ ಸಮತೋಲನ ಕಾಪಾಡುವ ಅರಣ್ಯ ಸಂರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೊಸನಗರ ಜೆಎಂಎ್ಸಿ ನ್ಯಾಯಾಲಯದ ನ್ಯಾಯಾಧೀಶ ಮಾರುತಿ ಶಿಂಧೆ ಅಭಿಪ್ರಾಯಪಟ್ಟರು.

ತಾಲೂಕಿನ ನಗರ ವಲಯ ಅರಣ್ಯಾಧಿಕಾರಿ ಕಚೇರಿ ಆವರಣದ ಹುತಾತ್ಮ ಸ್ಮಾರಕ ಸ್ಥಳದಲ್ಲಿ ಆಯೋಜಿಸಿದ್ದ ಅರಣ್ಯ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮ ಅರಣ್ಯ ಸಂರಕ್ಷಕರಿಗೆ ಗೌರವ ನಮನ ಸಲ್ಲಿಸಿದರು.

ಮನೆಯಂಗಳದ ಒಂದು ಗಿಡವನ್ನು ಜೋಪಾನ ಮಾಡುವುದೇ ಕಷ್ಟದ ಕೆಲಸ. ಇನ್ನೂ ಅರಣ್ಯ ಸಂರಕ್ಷಣೆ ಮಾಡುವುದು ಸವಾಲಿನಿಂದ ಕೂಡಿರುತ್ತದೆ. ಅರಣ್ಯ ರಕ್ಷಣೆ ಮಾಡುವಾಗ ಮಡಿದ ಮಹನೀಯರ ಸೇವೆಗೆ ಬೆಲೆ ಕಟ್ಟಲಾಗದು ಎಂದರು.

ಹೊಸನಗರ ಎಸಿಎ್ ಮೋಹನಕುಮಾರ್ ಮಾತನಾಡಿ, ಜಗತ್ತಿನಲ್ಲೇ ಶ್ರೇಷ್ಠ ಸಂಪತ್ತು ಅರಣ್ಯ. ಅದು ಉಳಿದರೆ ಜಗತ್ತಿನ ಉಳಿವು ಸಾಧ್ಯ. ಅರಣ್ಯದ ನಾಶ ಜಗತ್ತಿನ ವಿನಾಶ ಎಂಬುದನ್ನು ಅರಿಯಬೇಕು. ಅರಣ್ಯ ಸಿಬ್ಬಂದಿ ಸೇವೆ ಕಠಿಣವಾದುದು. ಜನರು ಸಹಕಾರ ನೀಡಬೇಕು. ನಮ್ಮ ಪರಿಸರವನ್ನು ನಾವೆಲ್ಲರು ಕಾಪಾಡಬೇಕು ಎಂದು ತಿಳಿಸಿದರು.

ಅರಣ್ಯ ಇಲಾಖೆಯ ವಿವಿಧ ವಿಭಾಗದ ಪರವಾಗಿ ಅಧಿಕಾರಿಗಳು ಹುತಾತ್ಮರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ನಗರ ವಲಯ ಅರಣ್ಯಾಧಿಕಾರಿ ಸಂತೋಷ್ ಮಲ್ಲನಗೌಡ, ಪ್ರಮುಖರಾದ ಅಮೃತ್ ಸಿ. ಸುಂಕದ್, ಲಿಂಗರಾಜು, ಸತೀಶ್, ರಾಜೇಂದ್ರ, ಅಶೋಕ, ಬಸವರಾಜ, ಅಕ್ಷಯಕುಮಾರ, ಪ್ರವೀಣಕುಮಾರ, ರಾಘವೇಂದ್ರ, ಅಶೋಕಕುಮಾರ್, ಅನಿಲ್ ಬೆಳ್ಳಣ್ಣನವರ್, ಆಂಜನೇಯ, ಮಂಜುನಾಥ್, ಹಾಲೇಶಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net