

ಜೈಪುರ: ವಿದೇಶಿ ಮಹಿಳೆಯೊಬ್ಬಳು ರಾಜಸ್ಥಾನ ರಾಜಧಾನಿ ಜೈಪುರದ ಫೈವ್ ಸ್ಟಾರ್ ಹೋಟೆಲ್ನಲ್ಲಿ ಬೆತ್ತಲಾಗುವ ಮೂಲಕ ಭಾರೀ ಹೈಡ್ರಾಮ ಸೃಷ್ಟಿಸಿದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೂಗಾಡುತ್ತಲೇ ಕೋಣೆಯಿಂದ ಬೆತ್ತಲಾಗಿ ಹೊರಬಂದ ವಿದೇಶಿ ಮಹಿಳೆ ಹೋಟೆಲ್ ಸಿಬ್ಬಂದಿಯನ್ನು ಬಾಯಿಗೆ ಬಂದಂತೆ ನಿಂದಿಸಿ ಭಾರೀ ಗಲಾಟೆ ಎಬ್ಬಿಸಿದಳು. ಅಲ್ಲದೆ, ಸಿಬ್ಬಂದಿ ಮೇಲೆ ದಾಳಿಗು ಮುಂದಾದಳು. ಮೈ ಮೇಲೆ ಒಂಚೂರು ಬಟ್ಟೆ ಇಲ್ಲದೆ ಸಂಪೂರ್ಣ ಬೆತ್ತಲಾದ ಮಹಿಳೆ, ಹೋಟೆಲ್ನ ಪುರುಷ ಸಿಬ್ಬಂದಿ ಎದುರು ಅಸಭ್ಯವಾಗಿ ವರ್ತಿಸಿದಳು.
ವಿದೇಶಿ ಮಹಿಳೆ ಆ ರೀತಿ ವರ್ತಿಸಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಹೋಟೆಲ್ನಲ್ಲಿ ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತಾ ಈ ರೀತಿ ವರ್ತಿಸಿದ್ದಾಳೆ ಎನ್ನಲಾಗಿದೆ. ಕೊನೆಗೆ ಮಹಿಳೆಯ ಕಾಟ ತಾಳದೇ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಜಾಲತಾಣದಲ್ಲಿ ಮಹಿಳೆಯ ವಿಡಿಯೋ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಏನಾದರೂ ಸಮಸ್ಯೆ ಇದ್ದರೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಈ ರೀತಿ ಅಸಭ್ಯವಾಗಿ ನಡೆದುಕೊಳ್ಳಬಾರದು. ಈ ರೀತಿಯ ವರ್ತನೆಯನ್ನು ನಿಮ್ಮ ದೇಶದಲ್ಲಿ ಇಟ್ಟುಕೊಳ್ಳಿ, ಇದು ಭಾರತ. ಇಲ್ಲಿ ನಮ್ಮದೇಯಾದ ಸಂಸ್ಕೃತಿ ಇದೆ ಎಂದು ನೆಟ್ಟಿಗರು ಟೀಕಾಪ್ರಹಾರ ನಡೆಸಿದ್ದಾರೆ. (ಏಜೆನ್ಸೀಸ್)