ಇದು…ಇದು ಭಾರತೀಯ ಸಂಸ್ಕ್ರತಿ ಅಂದ್ರೆ; ದೇವಸ್ಥಾನದಲ್ಲಿ ಹೊಸ ಸ್ಕೂಟಿಗೆ ಪೂಜೆ ಸಲ್ಲಿಸಿದ ವಿದೇಶಿ ಯುವತಿ

viralNews (2)
Published on

ಬೆಂಗಳೂರು: ಯಾವುದೇ ವಾಹನ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ.. ಪೂಜೆ ಮಾಡುವ ಮೂಲಕ ಪ್ರಾರಂಭಿಸುತ್ತಾರೆ. ವಾಹನಗಳನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿ ಅರ್ಚಕರು ವಿಶೇಷ ವಾಹನ ಪೂಜೆ ನೆರವೇರಿಸಿ ಶುಭ ಮುಹೂರ್ತದಲ್ಲಿ ಚಾಲನೆ ಮಾಡುತ್ತಾರೆ. ಹಾಗೆ ಮಾಡಿದರೆ ಎಲ್ಲವೂ ಚೆನ್ನಾಗಿರುತ್ತದೆ ಮತ್ತು ಅಪಾಯ ತಪ್ಪುತ್ತದೆ ಎಂಬ ನಂಬಿಕೆ ಇದೆ. ಆದ್ರೆ.. ವಿದೇಶಿ ಯುವತಿಗೂ ಈಗ ಇದೇ ನಂಬಿಕೆ ಇದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​​ ಆಗಿದೆ.

ಇತ್ತೀಚೆಗಷ್ಟೇ ಯುವತಿಯೊಬ್ಬಳು ತಾನು ಖರೀದಿಸಿದ್ದ ಸ್ಕೂಟರ್ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದಳು. ಅಲ್ಲಿ ವಿಶೇಷ ಪೂಜೆ ಮಾಡಿಸಿದ್ದಾಳೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿದೇಶಿ ಯುವತಿ ನಮ್ಮ ಸಂಸ್ಕೃತಿಯನ್ನು ಗೌರವಿಸಿ ವಾಹನ ಪೂಜೆ ಮಾಡಿದ್ದಾಳೆ. ಮುಂಬೈನಲ್ಲಿ ಈ ಪೂಜೆ ನಡೆದಿದೆ ಎಂದು ವರದಿಯಾಗಿದೆ. ಈ ಸ್ಕೂಟರ್ ಮಹಾರಾಷ್ಟ್ರ ನೋಂದಣಿ ನಂಬರ್ ಪ್ಲೇಟ್ ಹೊಂದಿದೆ. ಮುಂಬೈನಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಯುವತಿಯೊಬ್ಬಳು ತನ್ನ ಸ್ಥಳದಿಂದ ಕಚೇರಿಗೆ ಹೋಗಲು ಸ್ಕೂಟಿ ಖರೀದಿಸಿದ್ದಾಳೆ.

ವಿದೇಶಿಗರು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ಕೆಲವು ವರ್ಷಗಳಿಂದ ವಿದೇಶಿಗರು ಭಾರತೀಯ ಸಂಪ್ರದಾಯ ಮತ್ತು ಪದ್ಧತಿಗಳನ್ನು ಗುರುತಿಸುತ್ತಿದ್ದಾರೆ. ನಾವು ಕೆಲವು ವಿಧಾನಗಳನ್ನು ಹೇಗೆ ಅನುಸರಿಸುತ್ತೇವೆಯೋ, ಅವರು ಕೂಡ ಅದೇ ರೀತಿ ಮಾಡುತ್ತಿದ್ದಾರೆ. ಕೆಲವರು ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮೂಢನಂಬಿಕೆ ಎಂದು ಗೇಲಿ ಮಾಡುತ್ತಾರೆ. ಆದರೆ, ಈ ಯುವತಿ ನಮ್ಮ ನಂಬಿಕೆಗಳನ್ನು ಗೌರವಿಸುವುದನ್ನು ಅಭ್ಯಾಸ ಮಾಡುವುದು ದೊಡ್ಡ ವಿಷಯ ಎಂದು ಈ ವೀಡಿಯೊಗೆ ಕಮೆಂಟ್‌ಗಳು ಸಹ ಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net