

ಮುಂಬೈ: ಏಷ್ಯಾದ ದುರ್ಬಲ ಮಾರುಕಟ್ಟೆಗಳು ಮತ್ತು ತಾಜಾ ವಿದೇಶಿ ನಿಧಿಯ ಹೊರಹರಿವಿನ ಹಿನ್ನೆಲೆಯಲ್ಲಿ ಟಿಸಿಎಸ್, ಇನ್ಫೋಸಿಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ಭಾರಿ ಮಾರಾಟದಿಂದ ಮಂಗಳವಾರ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್‌ಇ ಮತ್ತು ನಿಫ್ಟಿ ತಲಾ 1 ಪ್ರತಿಶತದಷ್ಟು ಕುಸಿದವು.
30-ಷೇರುಗಳ ಬಿಎಸ್‌ಇ ಸೂಚ್ಯಂಕ 736.37 ಅಂಕಗಳು ಅಥವಾ ಶೇಕಡಾ 1.01 ರಷ್ಟು ಕುಸಿದು 72,012.05 ಕ್ಕೆ ಸ್ಥಿರವಾಯಿತು. ದಿನದ ವಹಿವಾಟಿನ ನಡುವೆ, ಇದು 815.07 ಅಂಕಗಳು ಅಥವಾ 1.12 ರಷ್ಟು ಕುಸಿದು 71,933.35 ಕ್ಕೆ ತಲುಪಿತ್ತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 238.25 ಅಂಕಗಳು ಅಥವಾ 1.08 ರಷ್ಟು ಕುಸಿದು 21,817.45 ಕ್ಕೆ ತಲುಪಿತು.
ಬ್ಯಾಂಕ್ ಬಡ್ಡಿ ದರ ಕುರಿತು ಈ ವಾರ ಅಮೆರಿಕ ಫೆಡ್ ನಿರ್ಧಾರ ಕೈಗೊಳ್ಳಲಿರುವುದರಿಂದ ಹೂಡಿಕೆದಾರರು ಜಾಗರೂಕರಾಗಿದ್ದರು ಎಂದು ವಿಶ್ಲೇಷಕರು ಹೇಳಿದ್ದಾರೆ.
ಪ್ರಮುಖ ಷೇರುಗಳ ಪೈಕಿ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಕಂಪನಿಯ ಷೇರು ಬೆಲೆಯು ಈ ಕಂಪನಿಯ ಪ್ರವರ್ತಕ ಟಾಟಾ ಸನ್ಸ್ ಅಂದಾಜು 2.3 ಕೋಟಿ ಷೇರುಗಳನ್ನು ಅಥವಾ 0.65 ಶೇಕಡಾ ಈಕ್ವಿಟಿ ಪಾಲನ್ನು ಬ್ಲಾಕ್ ಡೀಲ್‌ಗಳ ಮೂಲಕ ಮಾರಾಟ ಮಾಡಿದ್ದರಿಂದ ಶೇಕಡಾ 4 ರಷ್ಟು ಕುಸಿದಿದೆ.
ಇಂಡಸ್‌ಇಂಡ್ ಬ್ಯಾಂಕ್, ವಿಪ್ರೋ, ನೆಸ್ಲೆ, ಎಚ್‌ಸಿಎಲ್ ಟೆಕ್ನಾಲಜೀಸ್, ಇನ್ಫೋಸಿಸ್, ಪವರ್ ಗ್ರಿಡ್, ಐಟಿಸಿ, ಟೆಕ್ ಮಹೀಂದ್ರಾ, ಟಾಟಾ ಮೋಟಾರ್ಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ ಮುಂತಾದ ಷೇರುಗಳ ಬೆಲೆ ಕಂಡವು. ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಟೈಟಾನ್ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಲಾಭ ಗಳಿಸಿದವು.
ಏಷ್ಯದ ಮಾರುಕಟ್ಟೆಗಳ ಪೈಕಿ ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಕುಸಿತ ಕಂಡರೆ, ಟೋಕಿಯೊ ಲಾಭ ಗಳಿಸಿತು. ಐರೋಪ್ಯ ಮಾರುಕಟ್ಟೆಗಳು ಅಲ್ಪ ಲಾಭದೊಂದಿಗೆ ವಹಿವಾಟು ನಡೆಸಿದವು. ಅಮೆರಿಕದ ವಾಲ್ ಸ್ಟ್ರೀಟ್ ಸೋಮವಾರ ಲಾಭದಲ್ಲಿ ವಹಿವಾಟು ನಡೆಸಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸೋಮವಾರ 2,051.09 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರ ತಿಳಿಸಿದೆ.
30-ಷೇರುಗಳ ಬಿಎಸ್‌ಇ ಬೆಂಚ್‌ಮಾರ್ಕ್ ಸೂಚ್ಯಂಕವು 104.99 ಅಂಕಗಳು ಅಥವಾ ಶೇಕಡಾ 0.14 ರಷ್ಟು ಏರಿಕೆಯಾಗಿ ಸೋಮವಾರ 72,748.42 ಕ್ಕೆ ಸ್ಥಿರವಾಗಿತ್ತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕವು 32.35 ಅಂಕಗಳು ಅಥವಾ ಶೇಕಡಾ 0.15 ರಷ್ಟು ಏರಿಕೆಯಾಗಿ 22,055.70 ಕ್ಕೆ ತಲುಪಿತ್ತು.
ಬಿಎಸ್‌ಇ ಮಿಡ್ ಕ್ಯಾಪ್ ಸೂಚ್ಯಂಕ: 37,743.27 (ಶೇ. 1.36 ಕುಸಿತ)
ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕ: 41,545.77 (ಶೇ. 1.04 ಕುಸಿತ)
ನಿಫ್ಟಿ ಮಿಡ್ಕ್ಯಾಪ್ 100 ಸೂಚ್ಯಂಕ: 45,926.30 (ಶೇ. 1.24 ಕುಸಿತ)
ನಿಫ್ಟಿ ಸ್ಮಾಲ್ಕ್ಯಾಪ್ 100 ಸೂಚ್ಯಂಕ: 14,586.85 (ಶೇ.1.19 ಕುಸಿತ)