ದೌರ್ಜನ್ಯಕ್ಕೀಡಾದ ಹಿಂದುಗಳ ರಕ್ಷಿಸುವಂತೆ ಒತ್ತಾಯ

vhp and bajaranga dala manavi
ಬಾಂಗ್ಲಾದೇಶದಲ್ಲಿನ ಹಿಂದುಗಳನ್ನು ರಕ್ಷಿಸುವಂತೆ ಒತ್ತಾಯಿಸಿ ವಿಹಿಂಪ, ಬಜರಂಗದಳದ ಪದಾಧಿಕಾರಿಗಳು ಡಿಸಿ ಕಚೇರಿಗೆ ಮನವಿ ಸಲ್ಲಿಸಿದರು. ಜೆ.ಆರ್.ವಾಸುದೇವ್, ನಾರಾಯಣ ವರ್ಣೇಕರ್, ವಿನೋದ್‌ಕುಮಾರ್ ಜೈನ್, ವಡೀವೇಲು ರಾಘವನ್ ಇತರರಿದ್ದರು.
Published on

ಶಿವಮೊಗ್ಗ: ಬಾಂಗ್ಲಾದೇಶದಲ್ಲಿ ಅಮಾಯಕ ಹಿಂದುಗಳ ಮೇಲೆ ಕೊಲೆ, ಅತ್ಯಾಚಾರ ಹಾಗೂ ಮಂದಿರಗಳನ್ನು ಹಾಳು ಮಾಡುವುದನ್ನು ತಡೆಯುವಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿ ಕಾನೂನು ವ್ಯವಸ್ಥೆ ಹಾಳಾಗಿದೆ. ಇದರಿಂದ ಹಿಂದುಗಳ ಕೊಲೆ ಮತ್ತು ಹಿಂಸೆ ನಡೆಯುತ್ತಿದೆ. ಹಿಂದುಗಳ ೀ ಅವಸ್ಥೆಯನ್ನು ಸಹಿಸಲು ಅಸಾಧ್ಯ. ಬಾಂಗ್ಲಾದೇಶ ಒಂದು ಜಾತ್ಯತೀತ ರಾಷ್ಟ್ರ. ಆದರೆ ಕಟ್ಟರ್ ಮುಸ್ಲಿಮರು ಹಿಂದುಗಳ ಮೇಲೆ ದೌರ್ಜನ್ಯ ಎಸಗುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಕಿಡಿಕಾರಿದರು.
ದೌರ್ಜನ್ಯಕ್ಕೆ ಒಳಗಾದ ಹಿಂದುಗಳನ್ನು ರಕ್ಷಣೆ ಮಾಡಿ ಸಿಎಎ ಕಾನೂನಿನಡಿ ಭಾರತಕ್ಕೆ ಕರೆ ತರಬೇಕು. ಇದರೊಂದಿಗೆ ಎನ್‌ಆರ್‌ಸಿ ಕೂಡ ಜಾರಿಗೊಳಿಸಿ ಭಾರತವನ್ನು ನುಸುಳುಕೋರರಿಂದ ರಕ್ಷಿಸಬೇಕು ಎಂದು ಮನವಿ ಮಾಡಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಜೆ.ಆರ್.ವಾಸುದೇವ್, ಜಿಲ್ಲಾ ಕಾರ್ಯದರ್ಶಿ ನಾರಾಯಣ ಜಿ.ವರ್ಣೇಕರ್, ನಗರಾಧ್ಯಕ್ಷ ವಿನೋದ್‌ಕುಮಾರ್ ಜೈನ್, ಬಜರಂಗದಳದ ಜಿಲ್ಲಾ ಸಂಯೋಜಕ ವಡೀವೇಲು ರಾಘವನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net