ಅರಣ್ಯ ನಾಶ ತಡೆಗೆ ಒತ್ತಾಯ

sgr m
ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅರಣ್ಯ ನಾಶ, ಕೆರೆ ಒತ್ತುವರಿ ತಡೆಗಟ್ಟುವಂತೆ ಒತ್ತಾಯಿಸಿ ವೃಕ್ಷಲಕ್ಷ ಆಂದೋಲನಾ ಪದಾಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅನಂತ ಹೆಗಡೆ ಅಶೀಸರ, ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ, ಸುಬ್ರಾವ್ ಇತರರಿದ್ದರು.
Published on

ಸಾಗರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಪರಿಸರ, ಅರಣ್ಯ ನಾಶ, ಕೆರೆ ಒತ್ತುವರಿ, ಗಣಿಗಾರಿಕೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ವೃಕ್ಷಲಕ್ಷ ಆಂದೋಲನಾ ಪದಾಧಿಕಾರಿಗಳು ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

ಹೊಸನಗರ ತಾಲೂಕಿನ ಕುಂಬತ್ತಿ ಗಣಿಯಿಂದ ಸ್ಥಳೀಯರಿಗೆ ಸಾಕಷ್ಟು ಆರೋಗ್ಯ ಸಮಸ್ಯೆಗಳಾಗುತ್ತಿವೆ. ಸ್ಥಳೀಯ ಜನರ ಬದುಕು ಸಂಕಷ್ಟದಿಂದ ಕೂಡಿದೆ. ಸೊರಬ ತಾಲೂಕಿನಲ್ಲಿ ನಿರಂತರ ನಡೆಯುತ್ತಿರುವ ಮರಳು ಅಕ್ರಮ ಸಾಗಣೆ ನಡೆಯುತ್ತಿದೆ. ಅರಣ್ಯಗಳಲ್ಲಿ ನಡೆಯುತ್ತಿರುವ ಮರ ಕಡಿತಲೆ, ಬಗರ್‌ಹುಕುಂ ಹೆಸರಿನಲ್ಲಿ ಅರಣ್ಯ ನಾಶ ಹೆಚ್ಚುತ್ತಿದೆ. ಕಂತನಹಳ್ಳಿ ಸರ್ವೇ ನಂ.8ರಲ್ಲಿ ನಡೆದಿರುವ ಕಾಡಿನ ಮರಗಳ ಕಡಿತಲೆ ಬಗ್ಗೆ ಇಲಾಖೆ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹೊಳೆಮರೂರು, ತೋರಣಗೊಂಡನಕೊಪ್ಪ, ಗೊಗ್ಗೆಹಳ್ಳಿ, ಮುಟುಗುಪ್ಪೆ ಅರಣ್ಯಗಳಿಗೆ ಭದ್ರತೆ ನೀಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿದರು. ಅನಂತ ಹೆಗಡೆ ಅಶೀಸರ, ವೆಂಕಟೇಶ್ ಕವಲಕೋಡು, ಶ್ರೀಪಾದ ಬಿಚ್ಚುಗತ್ತಿ, ಆನೆಗುಳಿ ಸುಬ್ರಾವ್, ಮಂಜುನಾಥ್ ಹೆಗಡೆ, ಕೆ.ವಿ.ಕೃಷ್ಣಮೂರ್ತಿ, ಪ್ರಕಾಶ್ ಕಾಕಾಲ್, ಶ್ರೀಧರ್ ಭಾಗವತ್, ಗಂಗಾಧರ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net