ಏರ್‌ಪೋರ್ಟ್‌ಗೆ ಕುವೆಂಪು ಹೆಸರಿಡುವಂತೆ ಒತ್ತಾಯ

gopalagowda
ಶಿವಮೊಗ್ಗ ಏರ್‌ಪೋರ್ಟ್‌ಗೆ ಕುವೆಂಪು ಹೆಸರು ಅಧಿಕೃತಗೊಳಿಸುವಂತೆ ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಕಲ್ಲೂರು ಮೇಘರಾಜ್, ರೇಖಾ ನಾಯ್ಕ, ಎಚ್.ಎಂ.ಸಂಗಯ್ಯ, ಶಂಕ್ರಾನಾಯ್ಕಾ ಇತರರು ಪ್ರತಿಭಟನೆ ನಡೆಸಿದರು.
Published on

ಶಿವಮೊಗ್ಗ: ಸೋಗಾನೆಯಲ್ಲಿ ಕಾರ್ಯಾರಂಭ ಮಾಡಲಿರುವ ಏರ್‌ಪೋರ್ಟ್‌ಗೆ ಅಧಿಕೃತವಾಗಿ ರಾಷ್ಟ್ರಕವಿ ಕುವೆಂಪು ಅವರ ಹೆಸರಿಡಬೇಕು. ಈ ಸಂಬಂಧ ಅಧಿಸೂಚನೆ ಪ್ರಕಟಿಸಬೇಕೆಂದು ಒತ್ತಾಯಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ಪ್ರಮುಖರು ಗುರುವಾರ ಡಿಸಿ ಕಚೇರಿ ಎದುರು ಬಾಯಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು.

ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರಿಡಲು ಆಗ್ರಹಿಸಿ ನಮ್ಮ ಟ್ರಸ್ಟ್‌ನಿಂದ ಈ ಹಿಂದೆಯೇ ಜಿಲ್ಲಾಧಿಕಾರಿ ಕಚೇರಿ ಎದುರು ಕಪ್ಟುಪಟ್ಟಿ ಕಟ್ಟಿ ಪ್ರತಿಭಟನೆ ನಡೆಸಲಾಗಿತ್ತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡಾ ಕುವೆಂಪು ನಾಮಕರಣ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸಹಮತ ವ್ಯಕ್ತಪಡಿಸಿದ್ದರು. ಹೀಗಾಗಿ ಶೀಘ್ರದಲ್ಲೇ ಈ ಬಗ್ಗೆ ಅಧಿಸೂಚನೆ ಪ್ರಕಟಿಸಬೇಕೆಂದು ಆಗ್ರಹಿಸಿದರು.
ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಟ್ರಸ್ಟಿಗಳಾದ ಪ್ರೊ. ಕಲ್ಲನ, ಎಚ್.ಎಂ.ಸಂಗಯ್ಯ, ಶಿವಣ್ಣ, ಡಾ. ಕೆ.ಬಿ.ವೆಂಕಟೇಶ್, ನಾಗೇಶ್ ರಾವ್, ಶಂಕ್ರಾನಾಯ್ಕಾ, ಜಿ.ಮಂಜುಳಾ, ನರಸಿಂಹ ಮೂರ್ತಿ, ಸೋಮಶೇಖರಯ್ಯ, ರೇಖಾ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net