ಇದಕ್ಕಾ ಕನ್ನಡಿಗರು ನಿಮಗೆ ಮತ ನೀಡಿದ್ದು? ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ ಕಿಡಿ | R Ashok

ವಿಜಯವಾಣಿ - 2025-02-23T132520.017
Published on

ಬೆಂಗಳೂರು: ರೈತರು ಬೆಳೆದ ರಾಗಿ ಖರೀದಿಗೆ ಗೋಣಿ ಚೀಲ ಕೊರೆತೆ ಉಂಟಾಗಿದ್ದು, ಈ ಸಮಸ್ಯೆಯನ್ನು ಉಲ್ಲೇಖಿಸಿ, ಟ್ವೀಟ್​ ಮಾಡಿರುವ ರಾಜ್ಯ ವಿಪಕ್ಷ ನಾಯಕ ಆರ್​. ಅಶೋಕ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ತಾವು ಕಷ್ಟಪಟ್ಟು ಬೆಳೆದಿರುವ ಫಸಲನ್ನು ಒಳ್ಳೆ ಬೆಲೆಗೆ ಮಾರಿ, ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳಲು ಎದುರು ನೋಡುತ್ತಿರುವ ರಾಗಿ ಬೆಳೆಗಾರರಿಗೆ ಗೋಣಿ ಚೀಲದ ಕೊರತೆ ನೆಪ ಹೇಳಿ ರಾಗಿ ಖರೀದಿ ಮಾಡದೆ ರೈತರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸುತ್ತಿದೆ ಈ ದರಿದ್ರ ಕಾಂಗ್ರೆಸ್​ ಸರ್ಕಾರ" ಎಂದು ಆರ್​. ಅಶೋಕ ಕಿಡಿಕಾರಿದ್ದಾರೆ.

"ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರ ನಿಜವಾಗಿಯೂ ಬದುಕಿದೆಯೋ ಅಥವಾ ಸತ್ತಿದೆಯೋ ಒಮ್ಮೆ ಸ್ಪಷ್ಟವಾಗಿ ಹೇಳಿಬಿಡಿ. ಯಾವುದಾದರೂ ಒಂದು ಇಲಾಖೆ, ಒಬ್ಬ ಸಚಿವ ನೆಟ್ಟಗೆ ಕಾರ್ಯನಿರ್ವಹಣೆ ಮಾಡುತ್ತಿರುವ ಉದಾಹರಣೆ ನೀಡಿ ನೋಡೋಣ. ತಮ್ಮ ಆಡಳಿತದಲ್ಲಿ ಇಡೀ ಆಡಳಿತ ಯಂತ್ರ ಸ್ಟಬ್ಧವಾಗಿದೆ. ಸಚಿವರಿಗೆ ಕೆಲಸ ಮಾಡಲು ಆಸಕ್ತಿ ಇಲ್ಲ, ಅಧಿಕಾರಿಗಳು ನಿಯಂತ್ರಣದಲಿಲ್ಲ" ಎಂದಿದ್ದಾರೆ.

"ನಿಮ್ಮಲ್ಲಿ ಯಾವುದಕ್ಕೂ ಪೂರ್ವಸಿದ್ಧತೆ ಇಲ್ಲ, ಮುಂದಾಲೋಚನೆ ಇಲ್ಲ. ಯಾವುದೇ ಸಮಸ್ಯೆ ಬಂದರೂ ಅದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಅಂತ ಕೈಚೆಲ್ಲೋದು, ಇಲ್ಲಾ ಉಡಾಫೆ ಉತ್ತರ ಕೊಡೋದು. ಇದಕ್ಕಾ ಕನ್ನಡಿಗರು ನಿಮಗೆ ಮತ ನೀಡಿದ್ದು?" ಎಂದು ಟ್ವೀಟ್ ಮಾಡಿ ಟೀಕಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net