ಈ ವರ್ಷಾಂತ್ಯಕ್ಕೇ ಭಾರತದಲ್ಲಿ ಸಿಗುತ್ತಾ ಕರೊನಾ ಲಸಿಕೆ? ಕೆಲವೇ ವಾರಗಳಲ್ಲಿ ಭಾರತದಲ್ಲಿ ಅಂತಿಮ ಟ್ರಯಲ್​.

coronavirus-vaccine
Published on

ಬೆಂಗಳೂರು: ಜಗತ್ತಿನಾದ್ಯಂತ ಕರೊನಾ ಹಾವಳಿ ಹೆಚ್ಚುತ್ತಿರುವ ಮಧ್ಯೆಯೇ ಒಂದು ಆಶಾದಾಯಕ ಸುದ್ದಿ ಹೊರಬಿದ್ದಿದೆ. ರಷ್ಯಾದ ಕರೊನಾ ಲಸಿಕೆಗೆ ಇನ್ನು ಕೆಲವೇ ವಾರಗಳಲ್ಲಿ ಭಾರತದಲ್ಲಿ ಅಂತಿಮ ಟ್ರಯಲ್​ ನಡೆಯಲಿದೆ.

ಕರೊನಾ ವಿರುದ್ಧ ರಷ್ಯಾ ಕಂಡುಹಿಡಿಯುತ್ತಿರುವ 'ಸ್ಪುಟ್ನಿಕ್-ವಿ' ಕರೊನಾ ಲಸಿಕೆಗೆ ಭಾರತದಲ್ಲಿ ಡಾ. ರೆಡ್ಡಿ ಲ್ಯಾಬೊರೇಟರೀಸ್​ ಲಿ. ಸಂಸ್ಥೆ ಅಂತಿಮ ಟ್ರಯಲ್​ ಕೈಗೊಳ್ಳಲಿದೆ ಎಂಬ ಮಾಹಿತಿ ಔಷಧ ಕಂಪನಿಗಳ ವಲಯದಿಂದ ಹೊರಬಿದ್ದಿದೆ.

ಈ ಟ್ರಯಲ್​ಗೆ 1ರಿಂದ 2 ಸಾವಿರ ಮಂದಿ ನೋಂದಾಯಿಸಿಕೊಳ್ಳಲಿದ್ದು, ದೇಶಾದ್ಯಂತದ ವಿವಿಧ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಟ್ರಯಲ್​ ನಡೆಯಲಿದೆ. ಈ ಬಗ್ಗೆ ರಷ್ಯನ್ ಡೈರೆಕ್ಟ್​ ಇನ್​ವೆಸ್ಟ್​ಮೆಂಟ್​ ಫಂಡ್​ (ಆರ್​ಡಿಐಎಫ್​) ಮತ್ತು ಡಾ.ರೆಡ್ಡಿ ಲ್ಯಾಬೊರೇಟರೀಸ್​ ಸಂಸ್ಥೆ ನಡುವೆ ಒಪ್ಪಂದ ಏರ್ಪಟ್ಟಿದೆ. ವರ್ಷಾಂತ್ಯದ ವೇಳೆಗೆ ಭಾರತಕ್ಕೆ ವ್ಯಾಕ್ಸಿನ್​ ಪೂರೈಕೆ ಆಗಬಹುದು ಎಂದು ಆರ್​ಡಿಐಎಫ್​ ಹೇಳಿಕೊಂಡಿದ್ದರೂ ಈ ಟ್ರಯಲ್​ಗೆ ಕೆಲವು ತಿಂಗಳುಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net