ರೈತರಿಗೆ ಬೆಳೆ ವಿಮೆ ತುಂಬಲು ಜು. 31 ಕೊನೆಯ ದಿನ

je721538035802367-abc
Published on

ರಾಣೆಬೆನ್ನೂರ: 2025-&26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್​ ಭೀಮಾ ಯೋಜನೆಯನ್ನು ತಾಲೂಕು ವ್ಯಾಪ್ತಿಯಲ್ಲಿ ಗ್ರಾಪಂ ಹಾಗೂ ಹೋಬಳಿ ಮಟ್ಟದಲ್ಲಿ ಅಗ್ರಿಕಲ್ಚರ್​ ಇನ್ಸೂರೆನ್ಸ್​ ಕಂಪನಿ ಆಫ್​ ಇಂಡಿಯಾ ಲಿ. ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ತಾಲೂಕಿನ ರೈತರು ಪ್ರಕೃತಿ ವಿಕೋಪದಿಂದ ಉಂಟಾಗುವ ಇಳುವರಿ ನಷ್ಟ, ಬಿತ್ತನೆ ತಡೆ, ಮಧ್ಯಂತರ ವಿಪತ್ತು, ಕೊಯ್ಲಿನ ನಂತರದ ನಷ್ಟಗಳು ಹಾಗೂ ಸ್ಥಳಿಯ ವಿಪತ್ತುಗಳ ಬೆಳೆ ಹಾನಿಯಿಂದ ಉಂಟಾಗುವ ಆಥಿರ್ಕ ನಷ್ಟಕ್ಕೆ ಪರಿಹಾರ ಪಡೆಯಲು ಬೆಳೆ ವಿಮೆ ಪಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ ತಾಲೂಕಿನ ರೈತರು ಯೋಜನೆಯ ಲಾಭ ಪಡೆದುಕೊಳ್ಳಲು ಕೋರಲಾಗಿದೆ. ತಾಲೂಕಿನ ಎಲ್ಲ ಗ್ರಾಪಂ ಮಟ್ಟಕ್ಕೆ ಮುಸುಕಿನ ಜೋಳ (ಮಳೆ ಆಶ್ರಿತ) ಬೆಳೆಯನ್ನು ಅಧಿಸೂಚನೆ ಮಾಡಲಾಗಿದ್ದು, ವಿಮಾ ಕಂತು ತುಂಬಲು ಜು. 31 ಕೊನೆಯ ದಿನವಾಗಿದೆ. ರಾಣೆಬೆನ್ನೂರ ಹೋಬಳಿ ಮಟ್ಟಕ್ಕೆ ಶೇಂಗಾ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಸೋಯಾ ಅವರೆ (ಮಳೆ ಆಶ್ರಿತ ), ಸಾವೆ (ಮಳೆ ಆಶ್ರಿತ ), ಸೂರ್ಯಕಾಂತಿ (ಮಳೆ ಆಶ್ರಿತ), ಈರುಳ್ಳಿ(ಮಳೆ ಆಶ್ರಿತ), ಈರುಳ್ಳಿ(ನೀರಾವರಿ), ತೊಗರಿ(ಮಳೆ ಆಶ್ರಿತ), ಭತ (ನೀರಾವರಿ), ಮತ್ತು ಟೊಮೆಟೋ ಹಾಗೂ ಕುಪ್ಪೇಲೂರು ಹೋಬಳಿ ಮಟ್ಟಕ್ಕೆ ಹತ್ತಿ (ಮಳೆ ಆಶ್ರಿತ), ಹತ್ತಿ (ನೀರಾವರಿ), ಶೇಂಗಾ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಈರುಳ್ಳಿ(ಮಳೆ ಆಶ್ರಿತ), ಈರುಳ್ಳಿ(ನೀರಾವರಿ), ತೊಗರಿ(ಮಳೆ ಆಶ್ರಿತ), ಭತ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ), ಮತ್ತು ಟೊಮೆಟೊ ಹಾಗೂ ಮೇಡ್ಲೇರಿ ಹೋಬಳಿ ಮಟ್ಟಕ್ಕೆ ಶೇಂಗಾ (ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ), ಜೋಳ (ಮಳೆ ಆಶ್ರಿತ), ಜೋಳ(ನೀರಾವರಿ), ಈರುಳ್ಳಿ(ಮಳೆ ಆಶ್ರಿತ), ಈರುಳ್ಳಿ(ನೀರಾವರಿ), ತೊಗರಿ(ಮಳೆ ಆಶ್ರಿತ), ಭತ್ತ (ನೀರಾವರಿ), ಸೂರ್ಯಕಾಂತಿ (ಮಳೆ ಆಶ್ರಿತ) ಮತ್ತು ಟೊಮೆಟೋ ಬೆಳೆಗಳಿಗೆ ಅಧಿಸೂಚಿನೆ ಮಾಡಲಾಗಿದ್ದು, ವಿಮಾ ಕಂತು ತುಂಬಲು ಜು. 31 ಕೊನೆಯ ದಿನವಾಗಿದೆ. ಬೆಳೆ ಸಾಲ ಪಡೆಯದ ರೈತರು ಅಜಿರ್ಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ, ಫ್ರೂಟ್ಸ ಐಡಿ, ಕಂದಾಯ ರಶೀದಿ, ಖಾತೆ ಪುಸ್ತಕ, ಪಾಸ್​ ಪುಸ್ತಕ ಹಾಗೂ ಆಧಾರ್​ ಕಾರ್ಡ್​ ಸಂಖ್ಯೆ ನೀಡಿ ಬ್ಯಾಂಕ್​, ಸಾಮಾನ್ಯ ಸೇವ ಕೇಂದ್ರ, ಕರ್ನಾಟಕ ಒನ್​ ಹಾಗೂ ಗ್ರಾಮ ಒನ್​ ಕೇಂದ್ರಗಳಲ್ಲಿ ನೋಂದಾಯಿಸಬೇಕು. ರೈತ ಬಾಂಧವರು ತಮ್ಮ ಅಜಿರ್ಯಲ್ಲಿ ಯಾವ ಬೆಳೆ, ಮಳೆ ಆಶ್ರಿತವೋ ಅಥವಾ ನೀರಾವರಿಯೋ ಎಂಬುದನ್ನು ಖಚಿತಪಡಿಸಿಕೊಂಡು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪಕಿರ್ಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಾಮಣಿ.ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net