ಅಲೋಪಥಿಗಿಂತ ಆಯುರ್ವೇದಿಕ್ ಔಷಧವೇ ಬೆಸ್ಟ್: ಶೇ. 85 ಸೋಂಕಿತರು 5 ದಿನದಲ್ಲಿ ಗುಣ

ayurveda-corona
Published on

ನವದೆಹಲಿ: ಕರೊನಾ ಸೋಂಕಿಗೆ ಅಲೋಪಥಿ ಔಷಧಗಳಿಗಿಂತ ಆಯುರ್ವೇದಿಕ್ ಔಷಧಗಳೇ ಹೆಚ್ಚು ಪರಿಣಾಮಕಾರಿ ಎನ್ನುವುದು ಕ್ಲಿನಿಕಲ್ ಟ್ರಯಲ್‌ನ ವರದಿಯೊಂದರಿಂದ ತಿಳಿದುಬಂದಿದೆ.

ಆಂಧ್ರ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಕೆಲ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಅವರು ಆಲೋಪಥಿ ಔಷಧ ಪಡೆದವರಿಗಿಂತ ಬೇಗ ಗುಣಮುಖರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆಯುರ್ವೇದಿಕ್ ಔಷಧಗಳಾದ ಇಮ್ಯೂನ್ ಫ್ರೀ ಮತ್ತು ರೆಜಿನ್‌ಮ್ಯೂನ್‌ನನ್ನು ಕರೊನಾ ಸೋಂಕಿತರಿಗೆ ನೀಡಲಾಗುತ್ತಿದೆ. ಈ ಔಷಧ ಪಡೆದ ಶೇ. 85 ಸೋಂಕಿತರು ಐದು ದಿನಗಳೊಳಗೆ ಕರೊನಾದಿಂದ ಗುಣಮುಖರಾಗಿದ್ದಾರೆ. 10 ದಿನಗಳಲ್ಲಿ ಎಲ್ಲರ ವರದಿಯೂ ಕರೊನಾ ನೆಗೆಟಿವ್ ಬಂದಿದೆ ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net