ಬಕ್ರೀದ್ ಪ್ರಯುಕ್ತ; ಮೈಸೂರು ರಸ್ತೆ, ಬನ್ನೇರುಘಟ್ಟ ಮುಖ್ಯರಸ್ತೆಯಲ್ಲಿ ಸಂಚಾರ ನಿರ್ಬಂಧ

traffic (2)
Published on

ಬೆಂಗಳೂರು: ಬಕ್ರೀದ್ ಪ್ರಯುಕ್ತ ಸೋಮವಾರ (ಜೂ. 17) ಬನ್ನೇರುಘಟ್ಟ ಮುಖ್ಯರಸ್ತೆ ಮತ್ತು ಮೈಸೂರು ರಸ್ತೆಯಲ್ಲಿ ಸಾರ್ವಜನಿಕರ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಬನ್ನೇರುಘಟ್ಟ ಮುಖ್ಯರಸ್ತೆ ಗುರಪ್ಪನಪಾಳ್ಯ ಜಂಕ್ಷನ್‌ನಲ್ಲಿ ಹೆಚ್ಚಿನ ಜನರು ಪ್ರಾರ್ಥನೆ ಸಲುವಾಗಿ ಸೇರಲಿದ್ದು, ವಾಹನಸಂಚಾರವನ್ನು ಬೆಳಗ್ಗೆ 6ರಿಂದ ಪ್ರಾರ್ಥನೆ ಮುಗಿಯುವವರೆಗೂ ನಿಷೇಧಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಸಾಗರ್ ಆಸ್ಪತ್ರೆ ಜಂಕ್ಷನ್‌ನಿಂದ ಗುರಪ್ಪನಪಾಳ್ಯ ಜಂಕ್ಷನ್‌ವರೆಗೆ, ಜಿ.ಡಿ. ಮರ ಜಂಕ್ಷನ್‌ನಿಂದ ಗುರಪ್ಪನಪಾಳ್ಯ ಜಂಕ್ಷನ್‌ವರೆಗೆ ಮತ್ತು 39ನೇ ಕ್ರಾಸ್ ರಸ್ತೆಯಲ್ಲಿ ಗುರಪ್ಪನಪಾಳ್ಯ ಜಂಕ್ಷನ್‌ನಿಂದ ರೆಡ್ಡಿ ಆಸ್ಪತ್ರೆ ಜಂಕ್ಷನ್‌ವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಆದ್ದರಿಂದ ಡೇರಿ ಸರ್ಕಲ್‌ನಿಂದ ಬರುವ ವಾಹನಗಳು ಸಾಗರ್ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ತಿಲಕ್‌ನಗರ ಮುಖ್ಯರಸ್ತೆಯಲ್ಲಿ ಚಲಿಸಿ, ಸ್ವಾಗತ್ ಜಂಕ್ಷನ್‌ನಲ್ಲಿ ಎಡತಿರುವು ಪಡೆದು ಈಸ್ಟ್ ಎಂಡ್ ಮುಖ್ಯರಸ್ತೆಯಲ್ಲಿ ಚಲಿಸಬಹುದು. ಈಸ್ಟ್ ಎಂಡ್ ಜಂಕ್ಷನ್‌ನಲ್ಲಿ ಬಲತಿರುವು ಪಡೆದು 28ನೇ ಮೇನ್ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು 8ನೇ ಮುಖ್ಯರಸ್ತೆಯಲ್ಲಿ ಚಲಿಸಿ ನೇರ ಡಾಲ್ಮಿಯಾ ಜಂಕ್ಷನ್ ವರೆಗೆ ಚಲಿಸಿ ಅಲ್ಲಿ ಎಡಕ್ಕೆ ಹೊರರಿಂಗ್ ರಸ್ತೆಯಲ್ಲಿ ಎಡಕ್ಕೆ ತಿರುವು ಪಡೆದು ಜಿ.ಡಿ. ಮರ ಜಂಕ್ಷನ್ ಕಡೆಗೆ ಚಲಿಸಿ ಅಲ್ಲಿ ಬಲಕ್ಕೆ ಬನ್ನೇರುಘಟ್ಟ ಮುಖ್ಯ ರಸ್ತೆಗೆ ಸಂಪರ್ಕ ಪಡೆದು ಮುಂದೆ ಸಾಗಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಚಾಮರಾಜಪೇಟೆಯಲ್ಲಿ ಪ್ರಾರ್ಥನೆ

ಮೈಸೂರು ರಸ್ತೆಯ ಬಿ.ಬಿ. ಜಂಕ್ಷನ್ ಹತ್ತಿರದ ಮಸೀದಿ ಹಾಗೂ ಚಾಮರಾಜಪೇಟೆ 1ನೇ ಮುಖ್ಯರಸ್ತೆಯ 7ನೇ ಅಡ್ಡರಸ್ತೆ ಬಳಿಯ ಬಿಬಿಎಂಪಿ ಆಟದ ಮೈದಾನದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲಿದ್ದಾರೆ. ಆದರಿಂದ ಮೈಸೂರು ರಸ್ತೆ ಟೋಲ್‌ಗೇಟ್ ಜಂಕ್ಷನ್‌ನಿಂದ ಬಿಬಿ ಜಂಕ್ಷನ್ ಮೂಲಕ ಬಿಜಿಎಸ್ ್ಲೈಓವರ್ ಮೇಲ್ಭಾಗದಿಂದ ಟೌನ್‌ಹಾಲ್‌ವರೆಗೆ ಎಲ್ಲ ಮಾದರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಟೌನ್ ಹಾಲ್ ಕಡೆಯಿಂದ ಮೈಸೂರು ಕಡೆಗೆ ಬಿಜಿಎಸ್ ್ಲೈಓವರ್ ಮೇಲ್ಭಾಗದಿಂದ ಬಿಬಿ ಜಂಕ್ಷನ್ ಮಾರ್ಗವಾಗಿ ಟೋಲ್‌ಗೇಟ್ ಜಂಕ್ಷನ್‌ವರೆಗೆ ಎಲ್ಲ ಮಾದರಿ ವಾಹನ ಸಂಚಾರ ನಿಷೇಧಿಸಿ ಸಂಚಾರ ಪೊಲೀಸರು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net