VIDEO |ಪಾದಚಾರಿ ರಸ್ತೆಗೆ ತ್ರಿವರ್ಣ ಧ್ವಜದ ಬಣ್ಣ; ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಯ್ತು ಆಕ್ರೋಶ!

Footpath painted in tricolour ahead of PM Modi’s Indore visit raises
Published on

ಇಂದೋರ್: ಪ್ರಧಾನಿ ನರೇಂದ್ರ ಮೋದಿ 17ನೇ ಪ್ರವಾಸಿ ಭಾರತೀಯ ದಿನವನ್ನು ಉದ್ಘಾಟಿಸಲು ಇಂದೋರ್​ಗೆ ಆಗಮಿಸುತ್ತಿದ್ದಾರೆ. ದೇಶದ ಪ್ರಧಾನಿ ರಾಜ್ಯಕ್ಕೆ ಬರುತ್ತಿರುವ ನಿಟ್ಟಿನಲ್ಲಿ ಇಡೀ ನಗರದ ಕಳೆ ಬದಲಾಗಿದೆ. ಪ್ರಧಾನಿಯನ್ನು ಸ್ವಾಗತಿಸಲು ಸಕಲ ಸಿದ್ಧತೆಯೂ ಆಗಿದೆ. ಈ ನಡುವೆ ಇಂದೋರ್​ ನಗರದ ಪಾದಚಾರಿ ರಸ್ತೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ದೇಶದ ಜನರು ಸಾಕಷ್ಟು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಹೂಡಿಕೆದಾರರು ಹಾಗೂ ಎನ್​ಆರ್​ಐ ನಡುವಿನ ಶೃಂಗ ಸಭೆಯೂ ಇಂದೋರ್​ನಲ್ಲಿ ನಡೆಯಲಿದೆ. ಇದರ ಪೂರ್ವಸಿದ್ಧತೆಗಳನ್ನು ಹಂಚಿಕೊಂಡಿರುವ ವಿಡಿಯೋ ಇದೀಗ ವಿವಾದಕ್ಕೆ ಆಸ್ಪದ ಕೊಟ್ಟಿರುವಂತಹದ್ದು. ಇಲ್ಲಿನ ಪಾದಚಾರಿ ಮಾರ್ಗವೊಂದಕ್ಕೆ ತ್ರಿವರ್ಣ ಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣ ಬಳಿಯಲಾಗಿದೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಸ್ಥಳೀಯ ಆಡಳಿತ ಹಾಗೂ ಮಧ್ಯಪ್ರದೇಶ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ. ಇದನ್ನು ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜಕ್ಕೆ ಮಾಡಿರುವ ಅಪಮಾನ ಎಂದು ಟೀಕಿಸುತ್ತಿದ್ದಾರೆ. ಆದರೆ ಕೆಲವರು ಈ ಆರೋಪವನ್ನು ಅಲ್ಲಗಳೆದಿದ್ದು, ತ್ರಿವರ್ಣ ಧ್ವಜಕ್ಕೆ ಅವಮಾನವಾಗಿಲ್ಲ. ಬಣ್ಣ ಮಾತ್ರ ಬಳಿದಿದ್ದಾರೆ, ಬಿಳಿ ಬಣ್ಣದ ಮೇಲಿರುವ ಅಶೋಕ ಚಕ್ರವನ್ನು ಚಿತ್ರಿಸಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net