

ರಾಣೆಬೆನ್ನೂರ: ಮಂಡ್ಯ ಜಿಲ್ಲಾ ಪುಟಬಾಲ್ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 17ವರ್ಷದೊಳಗಿನ ರಾಜ್ಯಮಟ್ಟದ ಪುಟ್ಬಾಲ್ ಪಂದ್ಯಾವಳಿಯಲ್ಲಿ ನಗರದ ಡಿ ಯುನೈಟೆಡ್ ಪುಟಬಾಲ್ ಆಕಾಡೆಮಿ ತಂಡ ಪ್ರಥಮ ಸ್ಥಾನ ಪಡೆದಿದೆ.
ಅಂತಿಮ ಪಂದ್ಯದಲ್ಲಿ ಕೊಡಗು ತಂಡವನ್ನು 4-0 ಗೋಲುಗಳಿಂದ ಮಣಿಸಿ ಪ್ರಥಮ ಸ್ಥಾನ ಪಡೆದಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತರಬೇತುದಾರ ಪ್ರವಿಣಕುಮಾರ ಸಿ.ಎಂ. ತಿಳಿಸಿದ್ದಾರೆ.