ಹೆಜ್ಜೆಗುರುತು: ಸ್ವಾತಂತ್ರ್ಯದ ಅಮೃತ ಮಹೋತ್ಸವ..

Untitled-1
Published on

ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಸ್ವತಂತ್ರ ಭಾರತದ ಪ್ರಮುಖ ಸಾಧನೆಗಳು ಹಾಗೂ ಘಟನೆಗಳನ್ನು ಇಲ್ಲಿ ನೀಡಲಾಗುತ್ತದೆ.

  • 1947ರ ಆಗಸ್ಟ್ 15ರಂದು ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ. ಭಾರತ ಹಾಗೂ ಪಾಕಿಸ್ತಾನವಾಗಿ ದೇಶ ವಿಭಜನೆ. ಮೊದಲ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಆಯ್ಕೆ.
  • 1947ರ ನವೆಂಬರ್ 26ರಂದು ಭಾರತದ ಪ್ರಥಮ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರಿಂದ ಪ್ರಥಮ ಕೇಂದ್ರ ಬಜೆಟ್ ಮಂಡನೆ. ಬಜೆಟ್ ಗಾತ್ರ 197.29 ಕೋಟಿ ರೂಪಾಯಿ ಆಗಿತ್ತು.
  • 1948ರ ಆಗಸ್ಟ್ 3ರಂದು ತಿಂಗಳಲ್ಲಿ ಅಣು ಶಕ್ತಿ ಆಯೋಗ ಸ್ಥಾಪನೆ. ಅಣು ಶಕ್ತಿಯ ಸಂಬಂಧಿ ಸಂಶೋಧನೆ ಮತ್ತು ಬಳಕೆ ಉದ್ದೇಶ.
  • 1949ರ ಜ. 1ರಂದು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ರಾಷ್ಟ್ರೀಕರಣ ಮಾಡಲಾಯಿತು.
  • 1949ರ ನ. 26ರಂದು ಭಾರತದ ಶಾಸನ ರಚನಾ ಸಭೆಯು ಸಂವಿಧಾನವನ್ನು ಅಂಗೀಕರಿಸಿತು.
  • 1950ರ ಜನವರಿ 26ರಂದು ಸಂವಿಧಾನ ಅಂಗೀಕಾರದ ಮೂಲಕ ಗಣರಾಜ್ಯ ಅಸ್ತಿತ್ವಕ್ಕೆ.
  • 1950 ಮೇ ತಿಂಗಳಲ್ಲಿ ಖರಗಪುರದಲ್ಲಿ ಮೊಟ್ಟಮೊದಲ ಐಐಟಿ ಸ್ಥಾಪನೆ.
  • 1951ರಲ್ಲಿ ಪ್ರಥಮ ಪಂಚವಾರ್ಷಿಕ ಯೋಜನೆ ಜಾರಿ. ಕೃಷಿ ಅಭಿವೃದ್ಧಿಗೆ ಒತ್ತು. ದೇಶದ ಉನ್ನತಿಗಾಗಿ ವಿವಿಧ ಯೋಜನೆಗಳನ್ನು ರೂಪಿಸುವ ಗುರಿ.
  • 1951ರಲ್ಲಿ ರೈಲ್ವೆ ಜಾಲವನ್ನು ರಾಷ್ಟ್ರೀಕರಣಗೊಳಿಸಲಾಯಿತು. ಆಗ ಮೂರು ವಲಯಗಳಲ್ಲಿ ರೈಲ್ವೆಯನ್ನು ವಿಭಜಿಸಲಾಗಿತ್ತು. ಪ್ರಸ್ತುತ 19 ರೈಲ್ವೆ ವಲಯಗಳಿವೆ.
  • 1951ರಲ್ಲಿ ಪ್ರಥಮ ಏಷ್ಯನ್ ಕ್ರೀಡಾಕೂಟವನ್ನು ನವದೆಹಲಿಯಲ್ಲಿ ಆಯೋಜಿಸಲಾಯಿತು.
  • 1951ರ ಅಕ್ಟೋಬರ್ 25ರಿಂದ 1952ರ ಫೆಬ್ರುವರಿ 21ರವರೆಗೆ ಮೊದಲ ಮಹಾಚುನಾವಣೆ ಆಯೋಜನೆ. ದೇಶ ಸ್ವತಂತ್ರವಾದ ನಂತರ ಲೋಕಸಭೆಗೆ ಮೊದಲ ಚುನಾವಣೆ. 489 ಸ್ಥಾನಗಳು, ಅರ್ಹ ಮತದಾರರು 17.3 ಕೋಟಿ. ಭಾರತದ ದಲ ಚುನಾಯಿತ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಆಯ್ಕೆ.
  • 1953ರಲ್ಲಿ ವಿಮಾನಯಾನ ಸಂಸ್ಥೆಗಳ ರಾಷ್ಟ್ರೀಕರಣ. 9 ವಿಮಾನಯಾನ ಸಂಸ್ಥೆಗಳನ್ನು ವಿಲೀನಗೊಳಿಸಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಏರ್​ಲೈನ್ಸ್ ಮತ್ತು ಏರ್ ಇಂಡಿಯಾ ಇಂಟರ್ ನ್ಯಾಷನಲ್ ಸ್ಥಾಪನೆ.
  • 1954ರ ಏಪ್ರಿಲ್ 29ರಂದು ಚೀನಾದೊಂದಿಗೆ ಪಂಚಶೀಲ ತತ್ವ ಒಪ್ಪಂದಕ್ಕೆ ಸಹಿ. ಪರಸ್ಪರ ಭೌಗೋಳಿಕ ಸಮಗ್ರತೆಯನ್ನು ಗೌರವಿಸಿ ಸಹಬಾಳ್ವೆಯಿಂದ ಇರುವ ಸಂಕಲ್ಪ.
  • 1955ರ ಜುಲೈ 1ರಂದು ಭಾರತೀಯ ಸ್ಟೇಟ್ ಬ್ಯಾಂಕ್ ಅಸ್ತಿತ್ವಕ್ಕೆ. ಭಾರತೀಯ ಇಂಪಿರಿಯಲ್ ಬ್ಯಾಂಕ್​ನಲ್ಲಿನ ಶೇ. 60ರಷ್ಟು ಷೇರುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಖರೀದಿಸಿ, ಭಾರತೀಯ ಸ್ಟೇಟ್ ಬ್ಯಾಂಕ್ ಎಂದು ಮರುನಾಮಕರಣ ಮಾಡಲಾಯಿತು.
  • 1956ರ ಆಗಸ್ಟ್ 4ರಂದು ಭಾರತದ ಹಾಗೂ ಏಷ್ಯಾದ ಮೊದಲ ನ್ಯೂಕ್ಲಿಯರ್ ರಿಯಾಕ್ಟರ್ ‘ಅಪ್ಸರಾ’ ಸ್ಥಾಪನೆ. ಭಾರತದಲ್ಲಿ ಪ್ರಸ್ತುತ ಏಳು ನ್ಯೂಕ್ಲಿಯರ್ ಪವರ್ ಪ್ಲಾಂಟ್​ಗಳಲ್ಲಿ 21 ನ್ಯೂಕ್ಲಿಯರ್ ರಿಯಾಕ್ಟರ್​ಗಳು ಚಾಲ್ತಿಯಲ್ಲಿವೆ.
  • 1956ರ ನವೆಂಬರ್ 1ರಂದು ಭಾಷಾವಾರು ಆಧಾರಿತವಾಗಿ ಕರ್ನಾಟಕವೂ ಸೇರಿದಂತೆ 8 ರಾಜ್ಯಗಳ ಪುನರ್​ರಚನೆ.
  • 1957ರ ಏಪ್ರಿಲ್ 1ರಂದು ಭಾರತೀಯ ನಾಣ್ಯಗಳನ್ನು ದಶಮಾಂಶ ಪದ್ಧತಿಗೆ ಬದಲಾಯಿಸಲಾಯಿತು. ಇದಕ್ಕಾಗಿ ಭಾರತೀಯ ನಾಣ್ಯಗಳ ಕಾಯ್ದೆಗೆ ತಿದ್ದುಪಡಿ ತರಲಾಯಿತು. ರೂಪಾಯಿ, ಅಣೆ, ಪೈ ಬದಲಾಗಿ ರೂಪಾಯಿ, ಪೈಸೆ ವ್ಯವಸ್ಥೆ ಜಾರಿಗೆ ಬಂದಿತು.
  • 1958ರಲ್ಲಿ ‘ಮದರ್ ಇಂಡಿಯಾ’ ಹಿಂದಿ ಚಲನಚಿತ್ರವು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಚಿತ್ರವಾಗಿ ಹೊರಹೊಮ್ಮಿತು.
  • 1959ರಲ್ಲಿ ಸೋವಿಯತ್ ರಷ್ಯಾ ಒಕ್ಕೂಟದ ಸಹಯೋಗದಲ್ಲಿ ಒಡಿಶಾದ ರೂರ್ಕೆಲಾದಲ್ಲಿ ದೇಶದ ಪ್ರಥಮ ಸರ್ಕಾರಿ ಕಬ್ಬಿಣ ಕಾರ್ಖಾನೆ ಸ್ಥಾಪನೆ.

(ಮುಂದುವರಿಯುವುದು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net