

ವ್ಯರ್ಥವಾಗುತ್ತಿರುವ ಊಟದ ಬಗ್ಗೆ, ಅದರ ಹಿಂದೆ ರೈತ ಬೆವರು ಸುರಿಸಿರುವ ಬಗ್ಗೆ, ಏರುತ್ತಿರುವ ಇಂಗಾಲದ ಡೈಆಕ್ಸೈಡ್ ಬಗ್ಗೆ, ರಾಸಾಯನಿಕ ಗೊಬ್ಬರಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಯಾರಿಗೂ ವ್ಯವದಾನ ಇಲ್ಲ. ಆದರೆ, ಪ್ರಕೃತಿ ನೀಡಿದ ಊಟ ವ್ಯರ್ಥವಾಗುತ್ತಿದೆ. ಆ ಸಂದರ್ಭದಲ್ಲಿ ಊಟವಿಲ್ಲದೆ ಲಕ್ಷಾಂತರ ಜನ ಅಸುನೀಗುತ್ತಿದ್ದಾರೆ ಎನ್ನುವುದು ಅವರಿಗೆ ಜ್ಞಾಪಕಕ್ಕೆ ಬಾರದೆ ಮರೆತುಹೋಗುತ್ತದೆ. ಆದ್ದರಿಂದ ಇದರ ಬಗ್ಗೆ ಪ್ರತಿನಿತ್ಯ ಪದೇಪದೆ ಹೇಳುತ್ತಲೇ ಇರಬೇಕಾಗುತ್ತದೆ.
ಗಮನದಲ್ಲಿರಲಿ:
* ಪ್ರತಿ ದಿನ 20,000ಕ್ಕೂ ಹೆಚ್ಚು ಮಕ್ಕಳು ಹಸಿವಿನಿಂದ ಬಳಲಿ ಅಸುನೀಗುತ್ತಿದ್ದಾರೆ.
* 20 ಕೋಟಿಗಿಂತಲೂ ಹೆಚ್ಚು ಜನ ಊಟವಿಲ್ಲದೆ ಮಲಗುತ್ತಿದ್ದಾರೆ.
* ವಿಶ್ವಸಂಸ್ಥೆಯ ಪ್ರಕಾರ ಪ್ರಪಂಚದಲ್ಲಿ ಪ್ರತಿವರ್ಷ 1,300 ಕೋಟಿ ಟನ್‌ನಷ್ಟು ಆಹಾರ ಪದಾರ್ಥ ಬಳಕೆಯಾಗದೆ ವ್ಯರ್ಥವಾಗುತ್ತಿದೆ.
* 100 ಕೋಟಿಗಿಂತಲೂ ಹೆಚ್ಚು ಮಕ್ಕಳು ಅಥವಾ ಪ್ರತಿ 7 ಜನರಲ್ಲಿ ಒಬ್ಬರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.
*ನಮ್ಮ ದೇಶದಲ್ಲಿ ಪ್ರತಿವರ್ಷ 58,000 ಕೋಟಿ ರೂಪಾಯಿ ಮೌಲ್ಯದ ಆಹಾರ ಧಾನ್ಯಗಳು ಮತ್ತು ತರಕಾರಿಗಳು ಜನಸಾಮಾನ್ಯರ ಬಳಕೆಗೆ ಬಾರದೆ ಹಾಳಾಗುತ್ತಿವೆ, ರೈತ ಕಷ್ಟಪಟ್ಟ ದುಡಿಮೆ ವ್ಯರ್ಥವಾಗುತ್ತಿದೆ.
* ಆಹಾರ ಪದಾರ್ಥಗಳನ್ನು ಬೇಕಾದ ಪ್ರಮಾಣದಲ್ಲಿ ಉಪಯೋಗಿಸದೆ ವ್ಯರ್ಥ ಮಾಡುವುದರಲ್ಲಿ ಆರ್ಥಿಕವಾಗಲಿ, ಪರಿಸರಕ್ಕಾಗಲಿ, ನಮ್ಮತನಕ್ಕಾಗಲಿ ಲಾಭವಿಲ್ಲ.