

ಬೆಂಗಳೂರು: ಮಳೆಗಾಲ ಬಂದಿದೆ. ಯಾವಾಗ ಮಳೆ ಬರುತ್ತೋ ಗೊತ್ತಿಲ್ಲ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇರುವ ಇಂದಿನ ದಿನಗಳಲ್ಲಿ ಮಳೆ ಬಂದರೆ ಫೋನ್ ಏನಾಗುತ್ತದೋ ಎಂಬ ಭಯ ಮಾತ್ರ ನಿಂತಿಲ್ಲ. ವಾಟರ್ ಪ್ರೂಫ್ ಫೋನ್‌ಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹೆಚ್ಚಿನ ಜನರು ಸಾಮಾನ್ಯ ಫೋನ್‌ಗಳನ್ನು ಬಳಸುತ್ತಿದ್ದಾರೆ. ಇದರಿಂದ ಮಳೆಯಲ್ಲಿ ಒದ್ದೆಯಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ.
ಅಕಸ್ಮಾತ್ ಮಳೆಯಲ್ಲಿ ಫೋನ್ ಒದ್ದೆಯಾದರೆ ಫೋನ್ ರಿಪೇರಿಯಾದರೂ ಅದರ ಕೆಲವು ಭಾಗ ಹಾಳಾಗುವುದು ಖಚಿತ. ಆದರೆ ಮಳೆಯಲ್ಲಿ ಫೋನ್ ಒದ್ದೆಯಾದ ತಕ್ಷಣ ಒಂದಿಷ್ಟು ಟಿಪ್ಸ್ ಪಾಲಿಸಿದರೆ ಹಾಳಾಗದಂತೆ ಕಾಪಾಡಬಹುದು ಹಾಗಾದರೆ ಆ ಟಿಪ್ಸ್ ಏನು ಎಂದು ತಿಳಿಯೋಣ.
* ಫೋನ್ ನೀರಿನಲ್ಲಿ ಒದ್ದೆಯಾದ ತಕ್ಷಣ ಬ್ಯಾಟರಿಯನ್ನು ಮೊದಲು ತೆಗೆಯಬೇಕು. ಕೂಡಲೇ ಫೋನ್ ಆಫ್ ಮಾಡಿ.
* ಫೋನ್ ನೀರಿನಲ್ಲಿ ಒದ್ದೆಯಾದಾಗ ಹಲವರು ಹೇರ್ ಡ್ರೈಯರ್ ಬಳಸುತ್ತಾರೆ. ಆದಾಗ್ಯೂ, ಹಾಗೆ ಮಾಡುವುದರಿಂದ ಫೋನ್‌ನ ಘಟಕಗಳಿಗೆ ಹಾನಿಯಾಗಬಹುದು. ಆದ್ದರಿಂದ ಉತ್ತಮವಾದ ಆಯ್ಕೆಯೆಂದರೆ ಅದನ್ನು ಚೆನ್ನಾಗಿ ಗಾಳಿ ಇರುವ ಸ್ಥಳದಲ್ಲಿ ಇಡುವುದು.
* ಮಳೆಗಾಲದಲ್ಲಿ ನೀವು ಹೊರಗೆ ಹೋದಾಗಲೆಲ್ಲಾ ಒಂದು ಪ್ಲ್ಲ್ಯಾಸ್ಟಿಕ್ ಕವರ್ ನಿಮ್ಮೊಂದಿಗೆ ಇಟ್ಟುಕೊಳ್ಳಿ. ಮಳೆ ಬರುತ್ತಿದ್ದಂತೆ ಫೋನ್ ಕವರ್‌ನಲ್ಲಿ ಇರಿಸಿ ಹೀಗೆ ಮಾಡುವುದರಿಂದ ಫೋನ್‌ನಿಂದ ನೀರು ಹೀರಿಕೊಳ್ಳುವುದು ತಪ್ಪುತ್ತದೆ.
* ನೀರಿನಲ್ಲಿ ನೆನೆದ ಫೋನ್ ಅನ್ನು ಸ್ವಲ್ಪ ಸಮಯ ನಿಧಾನವಾಗಿ ಅಲ್ಲಾಡಿಸಿ. ಹೀಗೆ ಮಾಡುವುದರಿಂದ ಫೋನ್‌ಗೆ ಸೇರಿದ ಸ್ವಲ್ಪ ನೀರು ಹೊರಬರುತ್ತದೆ. ಹಾಗೆಯೇ ಹತ್ತಿ ಬಟ್ಟೆಯಿಂದ ಚೆನ್ನಾಗಿ ಒರೆಸಿ.
* ಫೋನ್ ನೀರಿನಲ್ಲಿ ಒದ್ದೆಯಾಗಿ ಮತ್ತು ಆಫ್ ಆಗಿದ್ದರೆ, ಯಾವುದೇ ಸಂದರ್ಭದಲ್ಲಿ ಚಾರ್ಜ್ ಮಾಡಬೇಡಿ. ಇದು ಶಾರ್ಟ್ ಸರ್ಕ್ಯೂಟ್ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
* ಮಳೆಯಲ್ಲಿ ಒದ್ದೆಯಾದ ನಂತರವೂ ಫೋನ್ ರೀಸ್ಟಾರ್ಟ್ ಆಗಿದ್ದರೂ ಅದನ್ನು ಸರ್ವೀಸ್ ಸೆಂಟರ್ ಗೆ ತೋರಿಸುವುದು ಉತ್ತಮ. ಫೋನ್ ಒಳಗೆ ಇನ್ನೂ ನೀರು ಇದ್ದರೆ, ಅದನ್ನು ತೆಗೆದುಹಾಕಬಹುದು