ಹಿರಿಯರು ತೋರಿದ ಮಾರ್ಗದಲ್ಲಿ ನಡೆಯಿರಿ

book (1)
ಸಾಗರದ ವಂದಗದ್ದೆ ಗಣೇಶ್ ಬರೆದ ‘ಕಣ್ಮರೆಯಾದ ಕಣ್ಮಣಿಗಳು, ವಂದಗದ್ದೆ ಚಂದ್ರಮೌಳಿ ಬರೆದ ‘ಆಧ್ಯಾತ್ಮ ಹಾಗೂ ಜೀವನ ಮೌಲ್ಯಗಳು’ ಕೃತಿಗಳನ್ನು.ಲೇಖಕ ಡಾ. ಎಚ್.ಎಸ್.ಮೋಹನ್ ಬಿಡುಗಡೆಗೊಳಿಸಿದರು. ಕೃಷ್ಣಯ್ಯ ಸದಾನಂದ ಶರ್ಮ, ಅಶ್ವಿನಿ ಕುಮಾರ್, ಹಿರೇಮಗಳೂರು ಕಣ್ಣನ್, ಟಿವಿ ಪಾಂಡುರಂಗ, ಎಂಟಿ ಗುಂಡಪ್ಪ ಗೌಡ, ನಂಜುಂಡಸ್ವಾಮಿ ಇತರರಿದ್ದರು.
Published on

ಸಾಗರ: ನಮ್ಮ ಹಿರಿಯರ ಬಗ್ಗೆ ತಿಳಿದುಕೊಳ್ಳುವ ಜತೆಗೆ ಅವರು ಹಾಕಿಕೊಟ್ಟ ಸನ್ಮಾರ್ಗವನ್ನು ಅನುಸರಿಸಬೇಕು ಎಂದು ಲೇಖಕ ಡಾ. ಎಚ್.ಎಸ್.ಮೋಹನ್ ಹೇಳಿದರು

ಇಲ್ಲಿನ ಭಾರತೀ ತೀರ್ಥ ಸಭಾಭವನದಲ್ಲಿ ಶೃಂಗೇರಿ ಶಂಕರಮಠ, ಜೋಷಿ ೌಂಡೇಶನ್ ಮತ್ತು ಸಿರಿಗನ್ನಡ ವೇದಿಕೆ ಆಶ್ರಯದಲ್ಲಿ ವಂದಗದ್ದೆ ಗಣೇಶ್ ಬರೆದ ‘ಕಣ್ಮರೆಯಾದ ಕಣ್ಮಣಿಗಳು’ ಹಾಗೂ ವಂದಗದ್ದೆ ಚಂದ್ರಮೌಳಿ ಬರೆದ ‘ಆಧ್ಯಾತ್ಮ ಹಾಗೂ ಜೀವನ ಮೌಲ್ಯಗಳು’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಕಿರಿಯರಿಗೆ ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ತಂದೆ-ತಾಯಿ ಹೊರತುಪಡಿಸಿ ಅಜ್ಜ, ಮುತ್ತಜ್ಜನ ಹೆಸರೇ ಗೊತ್ತಿರುವುದಿಲ್ಲ. ಅವರು ಸಮಾಜಕ್ಕೆ ನೀಡಿದ ಕೊಡುಗೆ, ಕುಟುಂಬ ಮುನ್ನಡೆಸಲು ಪಟ್ಟ ಶ್ರಮದ ಬಗ್ಗೆ ಅರಿವು ಹೊಂದಿರುವುದಿಲ್ಲ. ಹಿರಿಯರು ಸಮಾಜಕ್ಕೆ ಎಷ್ಟು ಅಮೂಲ್ಯ ಎನ್ನುವುದನ್ನು ವಿ.ಗಣೇಶ್ ತಮ್ಮ ಕೃತಿ ಮೂಲಕ ಪರಿಚಯಿಸುವ ಕೆಲಸ ಮಾಡಿದ್ದಾರೆ. ಸಮಾಜದ ವಿವಿಧ ಸ್ತರದ ಸಾಧಕರನ್ನು ಕೃತಿಯ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ಆಧ್ಯಾತ್ಮದ ಮೂಲಕ ಸಂತೃಪ್ತ ಬದುಕು ನಡೆಸಲು ಸಾಧ್ಯವಿದೆ ಎನ್ನುವುದನ್ನು ಚಂದ್ರಮೌಳಿ ತೋರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಕಣ್ಮರೆಯಾದ ಕಣ್ಮಣಿಗಳು ಕೃತಿ ನಮ್ಮವರನ್ನು ಮತ್ತೆಮತ್ತೆ ನೆನಪಿಸಿಕೊಳ್ಳುವ ಪ್ರಯತ್ನವಾಗಿದೆ. ಸಮಾಜಕ್ಕೆ ಅನೇಕರ ಕೊಡುಗೆ ಇರುತ್ತದೆ. ಅವರು ನೇಪಥ್ಯಕ್ಕೆ ಸರಿದ ತಕ್ಷಣ ಅವರನ್ನು ಮರೆಯುವ ಪರಿಪಾಠ ಹೆಚ್ಚಾಗುತ್ತಿದೆ. ನಮ್ಮ ನಡುವೆ ಇದ್ದು ಸಾಧನೆ ಮಾಡುತ್ತಿರುವವರ ಪರಿಚಯ ಸಮಾಜಕ್ಕೆ ಮಾಡಿಕೊಟ್ಟರೆ ಇನ್ನಷ್ಟು ಜನರಿಗೆ ಪ್ರೇರಣೆ ಸಿಗುತ್ತದೆ. ಅಂತಹ ಪ್ರೇರಣಾದಾಯಕ ಕೆಲಸ ಕಣ್ಮರೆಯಾದ ಕಣ್ಮಣಿಗಳು ಮಾಡಿದರೆ, ಅಧ್ಯಾತ್ಮ ಹಾಗೂ ಜೀವನ ಮೌಲ್ಯಗಳ ಪರಸ್ಪರ ಅನುಸಂಧಾನ ಕುರಿತು ಉತ್ತಮ ಕೃತಿ ಹೊರಗೆ ಬಂದಿದೆ ಎಂದರು.

ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಕೆ.ಆರ್.ಕೃಷ್ಣಯ್ಯ, ಸದಾನಂದ ಶರ್ಮ ಮಾತನಾಡಿದರು. ಟಿ.ವಿ.ಪಾಂಡುರಂಗ, ಎಂ.ಟಿ.ಗುಂಡಪ್ಪ, ಮಾ.ಸ.ನಂಜುಂಡಸ್ವಾಮಿ, ಕೃತಿಕಾರರಾದ ವಿ.ಗಣೇಶ್, ವಿ.ಚಂದ್ರಮೌಳಿ ಎಸ್.ಕೆ.ಪ್ರಭಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net