32 ಹಿರಿಯ ಕಲಾವಿದರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ

award feb 26 2020
Published on

ಉಡುಪಿ: ರಾಜ್ಯ ಜಾನಪದ ಅಕಾಡೆಮಿಯ 2019ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ 30 ಮಂದಿ ಹಿರಿಯ ಕಲಾವಿದರು ಹಾಗೂ ಇಬ್ಬರು ತಜ್ಞ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ಪಟ್ಟಿ ಪ್ರಕಟಿಸಿದರು.

ಎಂ. ಗೌರಮ್ಮ ಬೆಂಗಳೂರು ನಗರ, ಲಕ್ಷ್ಮಮ್ಮ ಬೆಂಗಳೂರು ಗ್ರಾಮಾಂತರ, ಅಂಕನಹಳ್ಳಿ ಶಿವಣ್ಣ ರಾಮನಗರ, ಅಂಗಡಿ ವೆಂಕಟೇಶಪ್ಪ ಕೋಲಾರ, ರಂಗಯ್ಯ ತುಮಕೂರು, ಪಿ.ಜಿ. ಪರಮೇಶ್ವರಪ್ಪ ದಾವಣಗೆರೆ, ತಿಪ್ಪಣ್ಣ ಚಿತ್ರದುರ್ಗ, ಮುನಿರೆಡ್ಡಿ ಚಿಕ್ಕಬಳ್ಳಾಪುರ, ಜಿ.ಸಿ. ಮಂಜಪ್ಪ ಶಿವಮೊಗ್ಗ, ಮಾದಶೆಟ್ಟಿ ಮೈಸೂರು, ಸ್ವಾಮಿಗೌಡ ಮಂಡ್ಯ, ಗೌರಮ್ಮ ಚಾಮರಾಜನಗರ, ಜೆ.ಕೆ. ರಾಮು ಕೊಡಗು, ಕಪಿನಿಗೌಡ ಕೆ. ಹಾಸನ, ಡಾ.ಎಚ್.ಸಿ. ಈಶ್ವರನಾಯಕ ಚಿಕ್ಕಮಗಳೂರು, ಸಾಧು ಪಾಣಾರ ಉಡುಪಿ, ರುಕ್ಮಯ್ಯ ಗೌಡ ದಕ್ಷಿಣಕನ್ನಡ, ಸಂಕಮ್ಮ ಬೆಳಗಾವಿ, ರುಕ್ಮಿಣಿ ಮಲ್ಲಪ್ಪ ಹರನಾಳ ಬಾಗಲಕೋಟೆ, ಮಲ್ಲಯ್ಯ ರಾಚಯ್ಯ ತೋಟಗಂಟಿ ಧಾರವಾಡ, ಹನುಮಂತಪ್ಪ ಹಾವೇರಿ, ನಾಗರಾಜ ನಿ. ಜಕ್ಕಮ್ಮನವರ್ ಗದಗ, ನಿಂಬೆವ್ವ ಕೆಂಚಪ್ಪಗುಬ್ಬಿ ವಿಜಯಪುರ, ಹುಸೇನಾಬಿ ಬುಡೆನ್‌ಸಾಬಿ ಸಿದ್ದಿ ಉತ್ತರಕನ್ನಡ, ಗಂಗಾಧರಯ್ಯ ಸ್ವಾಮಿ ಅಗ್ಗಿಮಠ ಕಲಬುರಗಿ, ತುಳಸಿರಾಮ ಭೀಮರಾವ ಸುತಾರ ಬೀದರ್, ಶಾಂತವ್ವ ಕೊಪ್ಪಳ, ಸೂಗಪ್ಪ ನಾಗಪ್ಪ ರಾಯಚೂರು, ವೇಷಗಾರ ಮೋತಿ ರಾಮಣ್ಣ ಬಳ್ಳಾರಿ, ಶಿವಮೂರ್ತಿ ತನೀಕೆದಾರ ಯಾದಗಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಡಾ.ಜಿ.ಶಂ. ಪರಮಶಿವಯ್ಯ ತಜ್ಞ ಪ್ರಶಸ್ತಿಗೆ ಡಾ.ಚಕ್ಕರೆ ಶಿವಶಂಕರ್ ರಾಮನಗರ, ಡಾ. ಬಿ.ಎಸ್. ಗದ್ದಿಗಿಮಠ ತಜ್ಞ ಪ್ರಶಸ್ತಿಗೆ ಡಾ. ಬಸವರಾಜ ಪೊಲೀಸ್‌ಪಾಟೀಲ್ ಕಲಬುರಗಿ ಆಯ್ಕೆಯಾಗಿದ್ದಾರೆ.

ಕಲಾವಿದರಿಗೆ ತಲಾ 25 ಸಾವಿರ ರೂ. ಹಾಗೂ ತಜ್ಞರಿಗೆ ತಲಾ 50 ಸಾವಿರ ನಗದು ಪ್ರಶಸ್ತಿ, ಸ್ಮರಣಿಕೆ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.

ವಿಶ್ವ ಸಂಸ್ಕೃತಿ ಪ್ರತಿಷ್ಠಾನ ಸಂಚಾಲಕ ಎಚ್.ಪಿ. ರವಿರಾಜ್, ಅಕಾಡೆಮಿಯ ಪ್ರಕಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net