ಗ್ಯಾರಂಟಿ ಅನುಷ್ಠಾನದ ಬಳಿಕ ತೆರಿಗೆ ಸಂಗ್ರಹಣೆಗೆ ಗಮನ; ಸಿಎಂ ಸರಣಿ ಸಭೆ

vidhanasoudha
Published on

ಬೆಂಗಳೂರು: ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಸರ್ಕಾರ ಇದೀಗ ಗ್ಯಾರಂಟಿಗೆ ಬೇಕಾದ ಹಣಕಾಸು ಹೊಂದಿಸಲು ತೆರಿಗೆ ಸಂಗ್ರಹಕ್ಕೆ ಗಮನ ನೀಡಲಾರಂಭಿಸಿದೆ.

ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಗುರುವಾರ ತೆರಿಗೆ ಸಂಗ್ರಹಣಾ ಇಲಾಖೆ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಈ ವರೆಗಿನ ತೆರಿಗೆ ಸಂಗ್ರಹಣೆ ಪ್ರಮಾಣ, ಆಗಬೇಕಾದ ಸುಧಾರಣೆ, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸೂಚನೆ ನೀಡಲಿದ್ದಾರೆ.

ಬೆಳಗ್ಗೆ ವಾಣಿಜ್ಯ ತೆರಿಗೆ ಇಲಾಖೆ, ಬಳಿಕ ಅಬಕಾರಿ ಇಲಾಖೆ, ಸಂಜೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಸಾರಿಗೆ ಇಲಾಖೆ, ಗಣಿ ಮತ್ತು ಭು ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸುವ ಸಿಎಂ ಕೊನೆಯಲ್ಲಿ ಆರ್ಥಿಕ ಇಲಾಖೆಯ ಸಭೆ ನಡೆಸುವರು.

ಈಗಾಗಲೇ ವಾಣಿಜ್ಯ ತೆರಿಗೆ ಇಲಾಖೆ ತೆರಿಗೆ ಸೋರಿಕೆ ತಡೆಗಟ್ಟಲು ನಿರಂತರ ದಾಳಿ ನಡೆಸುತ್ತಿದ್ದರೆ, ಮುದ್ರಾಂಕ ಇಲಾಖೆ ಆಸ್ತಿ ಮಾರ್ಗಸೂಚಿ ದರವನ್ನು ಪರಿಷ್ಕರಿಸುವ ಪ್ರಕ್ರಿಯೆಯ ಕೊನೆ ಹಂತದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net