

ಬೆಂಗಳೂರು: ಸ್ವಾತಂತ್ರ್ಯೋತ್ಸವದ ಭಾಗವಾಗಿ ಲಾಲ್ಬಾಗ್ನಲ್ಲಿ 214 ನೇ ಫ್ಲವರ್ ಶೋ ನಡೆಯಲಿದ್ದು ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಇಂದಿನಿಂದ ಶುರುವಾಗಲಿರುವ ಫಲಪುಷ್ಪ ಪ್ರದರ್ಶನ ಸ್ವಾತಂತ್ರ್ಯೋತ್ಸವದ ದಿನದ ತನಕವೂ ಮುಂದುವರೆಯಲಿದೆ.
ಈ ವಿಶಿಷ್ಟ ಫ್ಲವರ್ ಶೋ, ಇಂದಿನಿಂದ ಆರಂಭವಾಗಿ ಆಗಸ್ಟ್ 15ರವರೆಗೂ ನಡೆಯಲಿದೆ. ಈ ಬಾರಿ ಸೆಂಟರ್ ಆಫ್ ಅಟ್ರಾಕ್ಷನ್ ಹೂವಿನ ವಿಧಾನ ಸೌಧವಾಗಿರಲಿದೆ. ವಿಧಾನಸೌಧ ಹಾಗೂ ಕೆಂಗಲ್ ಹನುಮಂತಯ್ಯನವರ ಕಾನ್ಸೆಪ್ಟ್ನಲ್ಲಿ ಫ್ಲವರ್ ಶೋ ಅರಳಿದ್ದು, ಈ ಬಾರಿ ಸ್ವದೇಶಿಯ ಹೂಗಳಿಗೆ ಹೆಚ್ಚಿನ ಪ್ರಮುಖ್ಯತೆಯನ್ನು ನೀಡಲಾಗಿದೆ.
ಈ ಬಾರಿ ಹೂವಿನ ವಿಧಾನಸೌಧಕ್ಕೆ ಮೂರುವರೆ ಲಕ್ಷ ಹೂಗಳನ್ನು ಬಳಸಿಕೊಳ್ಳಲಾಗಿದೆ, ಈ ಸಲ ಫ್ಲವರ್ ಶೋಗೆ 10 ರಿಂದ 12 ಲಕ್ಷದಷ್ಟು ಜನ ಬರುವ ನಿರೀಕ್ಷೆ ಇದ್ದು, ಲಾಲ್ಬಾಗ್ನ ನಾಲ್ಕು ಗೇಟ್ಗಳಲ್ಲಿ ಜನರಿಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ನಾಳೆಯಿಂದ ಜನರಿಗೆ ಫ್ಲವರ್ ಶೋ ನೋಡಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದ್ದು ಇಂದು ಸಂಜೆ ಉದ್ಘಾಟನೆ ನಡೆಯಲಿದೆ.
ಫಲಪುಷ್ಪ ಪ್ರದರ್ಶನಕ್ಕೆ ಈಗಾಗಲೇ ದರ ನಿಗದಿ ಮಾಡಲಾಗಿದ್ದು ವಯಸ್ಕರಿಗೆ 80 ರೂ. ನಿಗದಿ ಮಾಡಲಾಗಿದೆ. ಇನ್ನು ಸಣ್ಣ ಮಕ್ಕಳಿಗೆ 30 ರೂ.ಗೆ ಟಿಕೆಟ್ ಲಭಿಸಲಿದೆ. ಇನ್ನು ಶಾಲಾ ಮಕ್ಕಳು ಸಮವಸ್ತ್ರದಲ್ಲಿ ಶಾಲೆಯ ಐಡಿ ಕಾರ್ಡ್ ಜತೆಗೆ ಬಂದರೆ, ಉಚಿತ ಪ್ರವೇಶ ಲಭಿಸಲಿದೆ. ಇನ್ನು ಭದ್ರತೆಯ ದೃಷ್ಟಿಯಿಂದ ಸುಮಾರು 200 ಸಿಸಿ ಕ್ಯಾಮರಾಗಳು ಹಾಗೂ 400 ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎನ್ನಲಾಗಿದೆ.
ಮರಿಗೌಡ ರೋಡ್ ಲಾಲ್ ಬಾಗ್ ಮುಖ್ಯದ್ವಾರದಿಂದ ನಿಮಾನ್ಸ್ ವರೆಗೆ ಎರಡೂ ರಸ್ತೆ ಬದಿ ವಾಹನ ನಿಲುಗಡೆಗೆ ನಿಷೇಧ ಹೇರಲಾಗಿದೆ. ಕೆಎಚ್ ರೋಡ್ನಿಂದ ಶಾಂತಿ ನಗರ ಬಸ್ ನಿಲ್ದಾಣವರೆಗೂ ವಾಹನಗಳನ್ನು ನಿಲ್ಲಿಸುವಂತಿಲ್ಲ. ಸಿದ್ದಯ್ಯ ರೋಡ್, ಊರ್ವಶಿ ಥೀಯೇಟರ್ ಜಂಕ್ಷನ್ ನಿಂದ ವಿಲ್ಸನ್ ಗಾರ್ಡನ್ವರೆಗೂ ಎಲ್ಲೂ ಪಾರ್ಕಿಂಗ್ಗೆ ಅವಕಾಶವಿಲ್ಲ. ಅಶೋಕ ಪಿಲ್ಲರದ ನಿಂದ ಸಿದ್ದಾಪುರ ಜಂಕ್ಷನ್ವರೆಗೆ ಹಾಗೂ ಆರ್ವಿ ಟೀಚರ್ಸ್ ಕಾಲೇಜ್ನಿಂದ ಆಶೋಕ್ ಪಿಲ್ಲರ್ವರೆಗೂ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ.