ಭಾರೀ ಮಳೆಯ ನಡುವೆಯೂ ಸುರಕ್ಷಿತವಾಗಿ ಇಳಿದ ವಿಮಾನ: ಕ್ಯಾಪ್ಟನ್​ ನೀರಜ್​ ಸೇಥ್​ಗೆ ಶ್ಲಾಘನೆ!| Mumbai

untitled-design-2025-08-20t104324728-68a5598aac0a9 (1)
Published on

Mumbai: ಮುಂಬೈನಾದ್ಯಂತ ಭಾರೀ ಮಳೆಯ ಹಿನ್ನಲೆ, ಬಲವಾಧ ಗಾಳಿಯ ನಡುವೆಯೂ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಯಶಸ್ವಿಯಾಗಿ ಇಳಿಸಿದ ಏರ್​ ಇಂಡಿಯಾ ಪೈಲೆಟ್​ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಿಮಾನದಲ್ಲಿದ್ದ ಓರ್ವ ಪ್ರಯಾಣಿಕ ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

Vidyasagar Jagadeesan ಎಂಬ ಹೆಸರಿನ (X)ಎಕ್ಸ್​ ಬಳಕೆದಾರನೊಬ್ಬರು ಭಾರೀ ಮಳೆಯ ನಡುವೆಯೂ ಕ್ಯಾಪ್ಟನ್​ ನಿರಜ್​ ಸೇಥ್​ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ಅವರಿಗೆ ಹ್ಯಾಟ್ಸ್​ ಆಫ್​ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತೀವ್ರ ಪರಿಸ್ಥಿತಿಗಳಲ್ಲಿ ವಿಮಾನವನ್ನು ಯಾವುದೇ ತೊಂದರೆ ಇಲ್ಲದೇ, ನಿಲ್ದಾಣವನ್ನು ತಲುಪಿಸಿದ್ದಕ್ಕೆ ಅನೇಕ ಬಳಕೆದಾರರು ಪೈಲಟ್ ಅವರನ್ನು 'ನಿಜವಾದ ಹೀರೋ' ಎಂದು ಶ್ಲಾಘಿಸಿದ್ದಾರೆ.

ಮುಂಬೈ ಮಳೆಯಿಂದ ಅಪಾರ ಹಾನಿ

ಮುಂಬೈನಲ್ಲಿ ಬಾರೀ ಮಳೆ ಸುರಿದ ಪರಿಣಾಮ ಭೂಕುಸಿತ ಸಂಭವಿಸಿದೆ. ಇನ್ನು ಭಾರತೀಯ ಹವಮಾನ ಇಲಾಖೆ ಮಂಗಳವಾರ ನಗರಕ್ಕೆ ರೆಡ್​ ಅಲರ್ಟ್​ ಘೋಷಿಸಿದೆ. ಇನ್ನು ತೀವ್ರ ಮಳೆ ಮತ್ತು ಬಲವಾದ ಗಾಳಿಯ ಬಗ್ಗೆ ಎಚ್ಚರಿಕೆ ನೀಡಿತ್ತು. ಮುಂಬೈ ಮತ್ತು ಅದರ ಉಪನಗರಗಳ ಹಲವಾರು ಭಾಗಗಳು ಜಲಾವೃತಗೊಂಡಿದ್ದು, ರಸ್ತೆಗಳು ನದಿಗಳಾಗಿ ಮಾರ್ಪಟ್ಟು ಹಾಗೂ ಅನೇಕ ಕಡೆಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಹವಾಮಾನ ವೈಪರೀತ್ಯದಿಂದ ವಿಮಾನ ಪ್ರಯಾಣಕ್ಕೆ ಅಡ್ಡಿಯುಂಟಾಗಿದೆ. ಹಾಗೆಯೇ ವಿಮಾನ ನಿಲ್ದಾಣ ಅಧಿಕಾರಿಗಳ ಪ್ರಕಾರ, ಮಂಗಳವಾರ 250 ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿ, ಹಲವು ವಿಮಾನಗಳು ತಡವಾಗಿ ಬಂದಿವೆ. ಇನ್ನು ಹವಾಮಾನ ಏರಿಳಿತಗಳಿಗೆ ಕಾರ್ಯಾಚರಣೆಗಳು ಗುರಿಯಾಗಿರುವುದರಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪ್ರಯಾಣಿಕರು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ಹವಮಾನ ಇಲಾಖೆ ಸೂಚನೆ ನೀಡಿದ್ದಾರೆ. (ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net