LIVE| ಮಾಣಿಕ್‌ ಷಾ ಪರೇಡ್ ಗ್ರೌಂಡ್ ಗಣರಾಜ್ಯೋತ್ಸವ: ರಾಜ್ಯಪಾಲರಿಂದ ಧ್ವಜಾರೋಹಣ

Vajubai Vala
Published on

9:37 AM: 2019 -20 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಸಾಲ ಮನ್ನಾ ಯೋಜನೆ ಅಡಿ 21 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ.

9:35 AM: ಬರ ತಡೆಯಲು ಜಲಾನಯನ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ತರಲಾಗಿದೆ.

9: 32 AM:  ಅರಣ್ಯ ಇಲಾಖೆ 2.87 ಕೋಟಿ ಸಸಿ ನೆಡುವ ಮೂಲಕ  ಅರಣ್ಯ ಪ್ರದೇಶವನ್ನು 41 ಸಾವಿರ 325 ಹೆಕ್ಟೇರ್​ಗೆ ಹೆಚ್ಚಿಸಲಾಗಿದೆ.

9:30 AM: ಅರಣ್ಯ ವರದಿ ಪ್ರಕಾರ, ಅರಣ್ಯ ಪ್ರದೇಶ ಹೆಚ್ಚಿಸಿರುವ ರಾಜ್ಯಗಳಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆದಿದೆ.

9: 27 AM: ನೆರೆಯಿಂದ ಹಾನಿಗೊಳಗಾದ ಮನೆಗಳಿಗೆ 50 ಸಾವಿರ ರೂ. ನೀಡಲಾಗಿದೆ.

9:24 AM: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ. ಪೊಲೀಸ್ ವ್ಯವಸ್ಥೆ ಸುಸಜ್ಜಿತವಾಗಿದ್ದು ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲಾಗಿದೆ. ಉತ್ತಮ ಆಡಳಿತದಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ.

9:18 AM: ಪರಿಸರ ಸಂರಕ್ಷಣೆಗೆ ರಾಜ್ಯ ಸರ್ಕಾರ ಉತ್ತಮ ಯೋಜನೆ ರೂಪಿಸಿದೆ. ಪರಿಸರ ರಕ್ಷಣೆಗೆ ಜನರು ಸರ್ಕಾರದ ಜತೆ ಕೈಜೋಡಿಸಬೇಕು.

9:14 AM : ರಾಜ್ಯದ ಜನರ ಉದ್ದೇಶಿಸಿ ರಾಜ್ಯಪಾಲರ ಭಾಷಣ. ರಾಜ್ಯದ ಜನರಿಗೆ ಶುಭಕೋರಿದ ರಾಜ್ಯಪಾಲರು.

9:10 AM: ರಾಜ್ಯಪಾಲರಿಂದ ಧ್ವಜಾರೋಹಣ

9: 05 AM :ರಾಜ್ಯಪಾಲರಿಂದ ಧ್ವಜವಂದನೆ ಸ್ವೀಕಾರ

9: 03 AM : ರಾಜ್ಯಪಾಲ ವಜುಬಾಯಿ ವಾಲಾ ಮಾಣಿಕ್​ ಷಾ ಪರೇಡ್​ ಗ್ರೌಂಡ್​ಗೆ ಆಗಮನ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net