ಭೂ ಮಾಪಕರ ವೇತನ ತಾರತಮ್ಯ ಸರಿಪಡಿಸಿ

TKE 2 (SURVEY)
Published on

ತರೀಕೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತರೀಕೆರೆ ಹಾಗೂ ಅಜ್ಜಂಪುರ ತಾಲೂಕಿನ ಪರವಾನಗಿ ಭೂ ಮಾಪಕರ ಸಂಘದ ಪದಾಧಿಕಾರಿಗಳು ಭೂ ದಾಖಲೆಗಳ ಸಹಾಯಕ ನಿರ್ದೇಶಕ ಮಂಜುನಾಥ್ ಸಿಂಗ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಭೂ ಮಾಪಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಸರ್ಕಾರಿ ಭೂ ಮಾಪಕರು ಮತ್ತು ಪರವಾನಗಿ ಭೂ ಮಾಪಕರಿಗೆ ನೀಡುವ ವೇತನದಲ್ಲಿ ಸಾಕಷ್ಟು ತಾರತಮ್ಯವಿದೆ. ದರಖಾಸ್ತು, ಕೆರೆ, ದೇವಸ್ಥಾನ, ಕೋರ್ಟ್ ಇತ್ಯಾದಿ ಪ್ರಕರಣಗಳ ಅಳತೆ ಕಾರ್ಯವನ್ನು ಪರವಾನಗಿ ಭೂ ಮಾಪಕರು ರಾಜ್ಯಾದ್ಯಂತ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಆಕಾರ್‌ಬಂದ್ ಗಣಕೀಕರಣ, ನಕ್ಷಾ ಯೋಜನೆ ಸೇರಿ ವಿವಿಧ ರೀತಿಯಲ್ಲಿ ಭೂ ಮಾಪನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಪರವಾನಗಿ ಪಡೆದ ಭೂ ಮಾಪಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಅಲ್ಲದೇ ಕನಿಷ್ಠ ಸವಲತ್ತು, ಅಳತೆ ಕೆಲಸ ಮತ್ತು ನೋಟಿಸ್ ಜಾರಿಗೊಳಿಸಲು ಅಗತ್ಯವಿರುವ ಬಾಂದು ಜವಾನರನ್ನು ಸಹ ನೀಡಿರುವುದಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net