ದೀದಿಗೆ ಶಾಕ್​ ಮೇಲೆ ಶಾಕ್​! ಟಿಎಂಸಿ ಅಭ್ಯರ್ಥಿಯೇ ಬಿಜೆಪಿ ಸೇರ್ಪಡೆ! ಕೈ ಕೊಟ್ಟ ಐವರು ಶಾಸಕರು

tmc
Published on

ಕೋಲ್ಕತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಟಿಎಂಸಿ ಪಕ್ಷಕ್ಕೆ ನಡುಕ ಶುರುವಾಗಿದೆ. ಟಿಎಂಸಿಗೆ ನಾಯಕರು ಕೈ ಕೊಡಲಾರಂಭಿಸಿದ್ದು ಬಿಜೆಪಿ ಸೇರಿ ಹೊಸ ಆಡಳಿತ ಸ್ಥಾಪಿಸಲು ಸಜ್ಜಾಗುತ್ತಿದ್ದಾರೆ. ಇದೀಗ ಟಿಎಂಸಿಯ ಐವರು ಶಾಸಕರು ಹಾಗೂ ಈ ಬಾರಿ ಅಭ್ಯರ್ಥಿ ಪಟ್ಟಿಯಲ್ಲಿರುವ ಓರ್ವ ಅಭ್ಯರ್ಥಿ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಶಾಸಕರಾಗಿರುವ ಸೋನಾಲಿ ಗುಹಾ, ಸೀತಾಲ್ ಸರ್ದಾರ್, ದೀಪೇಂದು ಬಿಸ್ವಾಸ್, ರಬೀಂದ್ರನಾಥ್ ಭಟ್ಟಾಚಾರ್ಯ ಮತ್ತು ಜತು ಲಾಹಿರಿ ಸೋಮವಾರದಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಇವರ ಜತೆ ಹಬೀಪುರದ ಟಿಎಂಸಿ ಅಭ್ಯರ್ಥಿ ಸರಲಾ ಮುರ್ಮು ಕೂಡ ಬಿಜೆಪಿಗೆ ಸೇರಿದ್ದಾರೆ. ಇದು ಆಡಳಿತದಲ್ಲಿರುವ ಟಿಎಂಸಿಗೆ ದೊಡ್ಡ ಶಾಕ್​ ಆಗಿದೆ.

ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಬಿಜೆಪಿ ನಾಯಕರಾದ ಸುವೆಂಡು ಅಧಿಕಾರಿ ಮತ್ತು ಮುಕುಲ್ ರಾಯ್ ಅವರ ಸಮ್ಮುಖದಲ್ಲಿ ಶಾಸಕರು ಕೇಸರಿ ಪಕ್ಷಕ್ಕೆ ಸೇರಿದ್ದಾರೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net