ನಿಂತಿದ್ದ ಟ್ರಕ್​ಗೆ ಹಿಂದಿನಿಂದ ಡಿಕ್ಕಿ ಹೊಡೆದ ಕಾರು; ಒಂದೇ ಕುಟುಂಬದ ಐವರು ಸ್ಥಳದಲ್ಲೇ ದುರ್ಮರಣ

Accident
Published on

ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ.

ಜಾರ್ಖಂಡ್​​ನ ಧಾನ್​ಬಾದ್​ನಲ್ಲಿ ದುರ್ಘಟನೆ ನಡೆದಿದೆ. ಈ ಐವರು ಪ್ರಯಾಣಿಸುತ್ತಿದ್ದ ಕಾರು, ನಿಂತಿದ್ದ ಸ್ಟೇಶನರಿ ಟ್ರಕ್​ಗೆ ಡಿಕ್ಕಿಯಾಗಿದ್ದೇ ಅವಘಡಕ್ಕೆ ಕಾರಣ.

ಗೋವಿಂದ್​ಪುರ-ಸಾಹಿಬ್‌ಗಂಜ್ ಹೆದ್ದಾರಿ ಬದಿಯಲ್ಲಿ ಟ್ರಕ್​ ನಿಲ್ಲಿಸಲಾಗಿತ್ತು. ಕಾರು ಹಿಂದಿನಿಂದ ಟ್ರಕ್​ಗೆ ಡಿಕ್ಕಿಯಾದ ಪರಿಣಾಮ ಐದು ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಕಾರು ಚಾಲಕ ಆಸ್ಪತ್ರೆಗೆ ದಾಖಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net