ಕಲಬುರಗಿಯ ಒಂದೇ ಕುಟುಂಬದ ಐವರು ಹೈದರಾಬಾದ್​​ನಲ್ಲಿ ಅನುಮಾನಾಸ್ಪದ ಸಾವು! | Kalaburagi

photo (71)
Published on

ಹೈದರಾಬಾದ್: ಒಂದೇ ಕುಟುಂಬದ ಐವರು ಸದಸ್ಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹೈದರಾಬಾದ್​ನ ಮಿಯಾಪುರದಲ್ಲಿ ಶುಕ್ರವಾರ ನಡೆದಿದೆ.

ಪೊಲೀಸರು ಇದು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ಮೃತರನ್ನು ಕಲಬುರಗಿ(Kalaburagi ) ಜಿಲ್ಲೆಯ ಸೇಡಂ ತಾಲೂಕಿನ ರಂಜೋಳ ಗ್ರಾಮದವರಾದ ಲಕ್ಷ್ಮಯ್ಯ (60), ಪತ್ನಿ ವೆಂಕಟಮ್ಮ (55), ಮಗಳು ಕವಿತಾ (24), ಅಳಿಯ ಅನಿಲ್ ಕುಮಾರ್ (32) ಎರಡು ವರ್ಷದ ಮೊಮ್ಮಗ ಮೃತರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹೈದ್ರಾಬಾದ್‌ನ ಮಿಯಾಪುರ್ ಪ್ರದೇಶದಲ್ಲಿರುವ ಮನೆಯಲ್ಲಿ ಮಲಗಿದ್ದ ಐವರು ಕೂಡಲೇ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಹಾಗೂ ಸ್ವಗ್ರಾಮದಲ್ಲಿ ಆಘಾತ ಉಂಟುಮಾಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net