ಮನೆಗೆ ಬೆಂಕಿಬಿದ್ದು ತೀವ್ರ ಹಾನಿ; ಸುಟ್ಟುಕರಕಲಾಯ್ತು 5 ಲಕ್ಷ ರೂಪಾಯಿ ನಗದು, ಚಿನ್ನದ ಸರ

Money 3 march 20
Published on

ದಾವಣಗೆರೆ: ಮನೆಗೆ ಬೆಂಕಿ ಬಿದ್ದು 5 ಲಕ್ಷ ರೂಪಾಯಿ ನಗದು ಸುಟ್ಟು ಕರಕಲಾದ ಘಟನೆ ಇಲ್ಲಿನ ಭಾರತ್​ ಕಾಲನಿಯಲ್ಲಿ ನಡೆದಿದೆ.

ಧರ್ಮಾ ನಾಯ್ಕ್​ ಎಂಬುವರ ಮನೆಗೆ ಬೆಂಕಿ ಬಿದ್ದು ಮನೆಯ ವಸ್ತುಗಳೆಲ್ಲ ಆಹುತಿಯಾಗಿವೆ. ಅಲ್ಲದೆ, ನಗರದೇವತೆ ದುರ್ಗಾಂಬಿಕಾ ಜಾತ್ರೆ ಹಿನ್ನೆಲೆಯಲ್ಲಿ ಸ್ವಸಹಾಯ ಸಂಘದ ಸದಸ್ಯರಿಗೆ ವಿತರಿಸಲು ಬ್ಯಾಂಕ್​ನಿಂದ ತಂದಿಟ್ಟುಕೊಂಡಿದ್ದ 5 ಲಕ್ಷ ರೂಪಾಯಿ ನಗದು ಕೂಡ ಬೆಂಕಿಗೆ ಆಹುತಿಯಾಗಿ ಸುಟ್ಟುಕರಕಲಾಗಿದೆ. ಚಿನ್ನದ ಸರವೂ ಕೂಡ ಬೆಂಕಿಯಿಂದ ಹಾಳಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಆರ್‌ಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net