ಯಾವುದೇ ಟೈಂನಲ್ಲೂ ಇವರು ಮಾತ್ರ ಫುಲ್​ ಅಲರ್ಟ್​: ಬೆಳ್ಳಂಬೆಳಗ್ಗೆ ಗಡಿಯಲ್ಲಿ ಐವರು ಉಡೀಸ್​

Troop
Published on: 

ನವದೆಹಲಿ: ಇಂದು ಮುಂಜಾನೆ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಬಳಿ ಐವರು ನುಸುಳುಕೋರರನ್ನು ಬಿಎಸ್​ಎಫ್​ ಯೋಧರು ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ.

ಪಂಜಾಬ್​​ ಅಂತಾರಾಷ್ಟ್ರೀಯ ಗಡಿಯ ಬಳಿ ಇಂದು ಮುಂಜಾನೆ ಕೆಲವರು ಅನುಮಾನಾಸ್ಪದವಾಗಿ ಒಳ ನುಸುಳುತ್ತಿರುವುದುನ್ನು ನೋಡಿದ ಗಡಿ ಭದ್ರತಾ ಪಡೆಯ 103ನೇ ಬೆಟಾಲಿಯನ್​ ಯೋಧರು ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯೋಧರು ಸುಮ್ಮನೆ ಫೈರಿಂಗ್ ಮಾಡಲಿಲ್ಲ. ಒಳನುಸುಳುತ್ತಿರುವವರನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅವರೇ ಮೊದಲು ಗುಂಡು ಹಾರಿಸಲು ಶುರು ಮಾಡಿದರು. ಹಾಗಾಗಿ ಅನಿವಾರ್ಯವಾಗಿ ಶೂಟ್ ಮಾಡಬೇಕಾಯಿತು ಎಂದಿದ್ದಾರೆ.

ಇಂದು ಮುಂಜಾನೆ ಸುಮಾರು 4.45ರ ಹೊತ್ತಿಗೆ ಘಟನೆ ನಡೆದಿದೆ. (ಏಜೆನ್ಸೀಸ್​)