ರಾಜಸ್ಥಾನದಲ್ಲೂ ಮತದಾರರಿಗೆ 5 ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್!

Congress
Published on

ನವದೆಹಲಿ: ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿ, ಅಭೂತಪೂರ್ವ ಬೆಂಬಲವನ್ನು ಪಡೆಯುವ ಮೂಲಕ ಕಾಂಗ್ರೆಸ್‌ ಭರ್ಜರಿ ಗೆಲುವನ್ನು ಸಾಧಿಸಿದೆ. ಸದ್ಯ ಇದೇ ಹಾದಿಯಲ್ಲಿ ಇದೀಗ ರಾಜಸ್ಥಾನಕ್ಕೂ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ.

ಕರ್ನಾಟಕದಲ್ಲಿ ಪ್ರತಿ ಮನೆಯೊಡತಿಗೆ ತಿಂಗಳಿಗೆ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 2000 ರೂ., ಗೃಹ ಜ್ಯೋತಿಯಡಿಯಲ್ಲಿ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್, ಯುವನಿಧಿ ಯೋಜನೆಯಡಿಯಲ್ಲಿ ಪದವಿಧರರಿಗೆ ತಿಂಗಳಿಗೆ 3000 ರೂ. ಮತ್ತು ಡಿಪ್ಲೊಮಾ ಮಾಡಿದವರಿಗೆ 1500 ರೂ., ಅನ್ನಭಾಗ್ಯ ಯೋಜನೆಯಡಿಯಲ್ಲಿ ತಿಂಗಳಿಗೆ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಉಚಿತ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಎಂಬ 5 ಭರವಸೆಯನ್ನು ನೀಡಿತ್ತು. ಸದ್ಯ ಇದೇ ರೀತಿಯಲ್ಲಿ ರಾಜಸ್ಥಾನಕ್ಕೂ ಕಾಂಗ್ರೆಸ್ ಉಚಿತ 5 ಗ್ಯಾರಂಟಿಗಳನ್ನು ಘೋಷಿಸಿದೆ. ಆ 5 ಗ್ಯಾರಂಟಿಗಳು ಈ ಕೆಳಕಂಡಂತಿವೆ:

  • ಪ್ರತಿ ಮನೆಯೊಡತಿಗೆ ತಿಂಗಳಿಗೆ 1500 ರೂ.
  • ಗ್ಯಾಸ್ ಸಿಲಿಂಡರ್ 500 ರೂ. ಸಹಾಯಧನ
  • 100 ಯೂನಿಟ್ ಉಚಿತ ವಿದ್ಯುತ್
  • ಕೃಷಿ ಸಾಲ ಮನ್ನಾ
  • ಹಳೇ ಪಿಂಚಣಿ ಯೋಜನೆ ಜಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net