ಇಂದಿನಿಂದ ಐದು ದೊಡ್ಡ ಬದಲಾವಣೆಗಳು: ಎಲ್​ಪಿಜಿ ಬೆಲೆ ಏರಿಕೆ ಸಾಧ್ಯತೆ

LPG
Published on

ನವದೆಹಲಿ: ದೇಶದ ಅರ್ಥ ವ್ಯವಸ್ಥೆಯ ಸ್ವರೂಪ ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಬದಲಾವಣೆಗಳಾಗುತ್ತಿವೆ. ಈ ನಡುವೆ, ನವೆಂಬರ್​ನಲ್ಲಿ ದೀಪಾವಳಿ, ಇತರೆ ಹಬ್ಬಗಳ ಕಾರಣ ರಜೆ ಹೆಚ್ಚಿರುವ ಕಾರಣ ಬ್ಯಾಂಕಿಂಗ್​ ವಹಿವಾಟಿನ ಮೇಲೆ ನೇರ ಪರಿಣಾಮವೂ ಬೀರಲಿದೆ. ವಾಟ್ಸ್​ಆ್ಯಪ್​ ತಂತ್ರಾಂಶ ಬಳಕೆದಾರರು ಕೂಡ ದೊಡ್ಡ ಬದಲಾವಣೆ ಎದುರಿಸಲು ಸಿದ್ಧರಾಗಬೇಕಾಗಿದೆ. ಹೀಗೆ ಇಂದಿನಿಂದ 5 ಬದಲಾವಣೆಗಳನ್ನು ನಿರೀೆ ಮಾಡುತ್ತಿದ್ದಾರೆ. ಅವುಗಳ ಸಂಪ್ತ ವಿವರ ಇಲ್ಲಿದೆ.

ಪಿಂಚಣಿದಾರರಿಗೆ ರಿಲ್​ೀ: ಎಸ್​ಬಿಐ ಪಿಂಚಣಿದಾರರಿಗೆ ಅನುಕೂಲವಾಗುವಂತಹ ಹೊಸ ಸೇವೆಯನ್ನು ಇಂದಿನಿಂದ ಆರಂಭಿಸುತ್ತಿದೆ. ಇದರಂತೆ, ಪಿಂಚಣಿದಾರರು ಅವರ ಲೈರ್​ ಸರ್ಟಿಫಿಕೇಟ್​ ಸಲ್ಲಿಸುವುದಕ್ಕೆ ಬ್ಯಾಂಕ್​ನ ಶಾಖೆಗೆ ಭೇಟಿ ನೀಡಬೇಕಾಗಿಲ್ಲ. ವಿಡಿಯೋ ಕರೆಯ ಮೂಲಕ ಕೂಡ ಇದನ್ನು ಮಾಡಬಹುದಾಗಿದೆ.

ಹೂಡಿಕೆದಾರರಿಗೆ ಶುಭಸುದ್ದಿ: ಷೇರುಪೇಟೆಯಲ್ಲಿ ಹೂಡಿಕೆದಾರರನ್ನು ಪಾಲಿಬಜಾರ್​, ಪೇಟಿಎಂ ಮುಂತಾದ ಕಂಪನಿಗಳ ಐಪಿಒಗಳು ಸೆಳೆಯುತ್ತಿವೆ. "ಢಚಚ' ಕಂಪನಿಯ ಐಪಿಒ ಮೇಲೆ ಹೂಡಿಕೆಗೆ ಇಂದೇ ಕೊನೆ ದಿನ. ಪಾಲಿಸಿ ಬಜಾರ್​ ಐಪಿಒ ಹೂಡಿಕೆ ಇಂದೇ ಶುರು. ಇದೇ ರೀತಿ ಪೇಟಿಎಂ ಕಂಪನಿ ಐಪಿಒ ನ.8ರಿಂದ ಹೂಡಿಕೆಗೆ ತೆರೆದುಕೊಳ್ಳುತ್ತಿದೆ.

ವಿಶೇಷ ರೈಲು ಸೇವೆ: ದೀಪಾವಳಿ ಮತ್ತು ಇತರೆ ಹಬ್ಬಗಳ ಪ್ರಯುಕ್ತ ಭಾರತೀಯ ರೈಲ್ವೆ ನವೆಂಬರ್​ನಲ್ಲಿ ಹಲವು ವಿಶೇಷ ರೈಲು ಸೇವೆಯನ್ನು ಇಂದಿನಿಂದ ಆರಂಭಿಸುತ್ತಿದೆ. ತಿಂಗಳು ಪೂರ್ತಿ ಈ ವಿಶೇಷ ರೈಲು ಸಂಚಾರ ಇರಲಿದೆ. ಅಕ್ಟೋಬರ್​ 25ರಂದು ದಣ ರೈಲ್ವೆ ಕೂಡ ವಿಶೇಷ ರೈಲು ಸಂಚಾರದ ವೇಳಾ ಪಟ್ಟಿಯನ್ನು ಪ್ರಕಟಿಸಿದೆ.

ವಾಟ್ಸ್​ಆ್ಯಪ್​ ಸೇವೆ ಎಲ್ಲರಿಗೂ ಇಲ್ಲ: ಅಪ್ಡೇಟ್​ ಆದ ಆಪರೇಟಿಂಗ್​ ಸಿಸ್ಟಂಗೆ ಹೊಂದಿಕೊಳ್ಳದ, ಅದರ ನಿಯಮಗಳನ್ನು ಒಪ್ಪಿಕೊಳ್ಳದ ಬಳಕೆದಾರರಿಗೆ ಇಂದಿನಿಂದ ವಾಟ್ಸ್​ಆ್ಯಪ್​ ಬಳಕೆ ಬಹುತೇಕ ಕಷ್ಟ ಸಾಧ್ಯ. ಇದು ಆಂಡ್ರಾಯ್ಡ್​ ಮತ್ತು ಐಒಎಸ್​ ಆ್ಯಪ್​ ಬಳಸುವವರಿಗೆ ಅನ್ವಯವಾಗಿರಲಿದ್ದು, ಅದಕ್ಕೂ ಮೊದಲೆ ತಂತ್ರಾಂಶ ಅಪ್ಡೇಟ್​ ಮಾಡುವಂತೆ ನೋಟಿಫಿಕೇಶನ್​ ಅನ್ನು ಅದು ಕಳುಹಿಸುತ್ತಿದೆ.

ಎಲ್​ಪಿಜಿ ಬೆಲೆ ಏರಿಕೆ ಸಾಧ್ಯತೆ

ಎಲ್​ಪಿಜಿ ಅಡುಗೆ ಅನಿಲ ದರ ನವೆಂಬರ್​ 1ರಿಂದ ಏರಿಕೆಯಾಗಲಿದೆ. ನೈಸರ್ಗಿಕ ಅನಿಲ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಏರಿಕೆ ಆಗಿದೆ. ಈಗಾಗಲೇ ನಾಲ್ಕು ಬಾರಿ ದರ ಏರಿಕೆಯಾಗಿದ್ದು, ದೆಹಲಿಯಲ್ಲಿ 900 ರೂಪಾಯಿ ಅಂಚಿನಲ್ಲಿದೆ. ಇದು ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net