ಶಿವಮೊಗ್ಗದಲ್ಲಿ ತಂಪೆರೆದ ವರ್ಷದ ಮೊದಲ ಮಳೆ

first rain came in shimogga
ಶಿವಮೊಗ್ಗದಲ್ಲಿ ವರ್ಷದ ಮೊದಲ ಮಳೆ ಸುರಿಯಿತು.
Published on

ಶಿವಮೊಗ್ಗ: ಹಲವು ದಿನಗಳಿಂದ ಬಿಸಿಲ ತಾಪಕ್ಕೆ ಬಸವಳಿದ್ದ ಜಿಲ್ಲೆಯ ಜನತೆಗೆ ಗುರುವಾರ ಸುರಿದ ಮಳೆ ಕೊಂಚ ತಂಪೆರೆಯಿತು. ಕಳೆದ ಎರಡ್ಮೂರು ದಿನಗಳಿಂದ ಹಲವೆಡೆ ಸುರಿದಿದ್ದ ವರ್ಷದ ಮೊದಲ ಮಳೆ ಸಂಜೆ ಶಿವಮೊಗ್ಗ ನಗರಕ್ಕೂ ಕಾಲಿಟ್ಟಿತು.

ಇತ್ತೀಚೆಗೆ ಶಿವಮೊಗ್ಗ ನಗರ ಸೇರಿ ಜಿಲ್ಲೆಯಾದ್ಯಂತ ಬಿಸಿಲ ತಾಪ 38ರಿಂದ 40 ಡಿಗ್ರಿವರೆಗೆ ತಲುಪಿತ್ತು. ಬಿಸಿಲಿಗೆ ಜನರು ಹೈರಾಣಾಗಿದ್ದರು. ಇದೀಗ ಶಿವಮೊಗ್ಗ, ಶಿಕಾರಿಪುರ, ಸಾಗರ ಸೇರಿ ಹಲವೆಡೆ ವರುಣ ಕೃಪೆ ತೋರಿದ್ದು ಜನರು ನಿಟ್ಟುಸಿರು ಬಿಡುವಂತೆ ಆಯಿತು.
ಮಧ್ಯಾಹ್ನ ಶಿವಮೊಗ್ಗ ತಾಲೂಕಿನ ಚೋರಡಿ, ಕುಂಸಿ, ಶಿಕಾರಿಪುರ ತಾಲೂಕಿನ ಹಲವೆಡೆ ಉತ್ತಮ ಮಳೆ ಆಯಿತು. ಸಂಜೆ ಶಿವಮೊಗ್ಗ ನಗರದ ಕೆಲವೆಡೆ ಮಳೆ ಆಯಿತು. ಮಳೆಯ ಮುನ್ಸೂಚನೆ ಇಲ್ಲದೆ ಮನೆಯಿಂದ ಹೊರಬಂದಿದ್ದ ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು ಮರ, ಅಂಗಡಿ ಮುಂಗಟ್ಟುಗಳ ಕೆಳಗೆ ಆಶ್ರಯ ಪಡೆದರು.
ವರ್ಷದ ಮೊದಲ ಮಳೆಯಿಂದ ಜನರು ಖುಷಿಯಿಂದಲೇ ಬರಮಾಡಿಕೊಂಡರು. ಮೊಬೈಲ್‌ಗಳಲ್ಲಿ ಫೋಟೊ, ವಿಡಿಯೋ ಮಾಡಿಕೊಂಡು ಸಂಭ್ರಮಿಸಿದರು. ವಾಟ್ಸ್‌ಆ್ಯಪ್, ಸ್ಟೇಷಸ್‌ಗಳಲ್ಲಿ ಮಳೆ ಫೋಟೋ ಹಂಚಿಕೊಂಡು ಖುಷಿ ಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net