

ಬೆಟ್ಟದಪುರ: ಬೆಟ್ಟದಪುರ ಎಸ್‌ಎಂಎಸ್ ವಿದ್ಯಾಸಂಸ್ಥೆಯ ಕಾಲೇಜಿನ ಉಪನ್ಯಾಸಕರು ಹಾಗೂ ಶಿಕ್ಷಕರು ಇತ್ತೀಚೆಗೆ ಮೈಸೂರಿನ ಪ್ರಮತಿ ಶಿಕ್ಷಣ ಸಂಸ್ಥೆ ವತಿಯಿಂದ ಬೋಧಕ ಮತ್ತು ಬೋಧಕೇತರ ವೃಂದದವರಿಗೆ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪ್ರಥಮ ಬಹುಮಾನವನ್ನು ಪಡೆಯುವ ಮೂಲಕ ಟ್ರೋಫಿಯನ್ನು ಮುಡಿಗೆರಿಕೊಂಡಿದ್ದಾರೆ.
ಬೋಧಕ ವೃಂದದವರ ಈ ಸಾಧನೆಗೆ ಮಂಗಳವಾರ ವಿದ್ಯಾಸಂಸ್ಥೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಬಿ.ವಿ ಮಂಜುನಾಥ್, ಪ್ರಾಂಶುಪಾಲ ರಾಜ ಎಸ್.ಕೆ, ಮುಖ್ಯಶಿಕ್ಷಕರಾದ ವೆಂಕಟೇಶ್, ಕುಮಾರ್, ಶಿಕ್ಷಕರಾದ ಶಿವಕುಮಾರ್, ಸತೀಶ್, ಅನಿಲ್, ಪ್ರತಾಪ್, ಬಸವರಾಜ್, ಕುಬೇರ್, ವಸಂತ್, ತಮ್ಮೇಗೌಡ, ಹರ್ಷಿತಾ, ಸೋಮಶೇಖರ್, ಸತೀಶ್, ಅಂದಾನಯ್ಯ ಇದ್ದರು.